Ad imageAd image

ಯೋಗ ಶಿಬಿರ, ಪ್ರವಚನದ ಸದುಪಯೋಗ ಪಡೆದುಕೊಳ್ಳಿ: ಅಶೋಕ ಅಲ್ಲಾಪೂರ

ಪಟ್ಟಣದ ಎಚ್.ಜಿ ಹೈಸ್ಕೂಲ್ ಮೈದಾನದಲ್ಲಿ ಆಗಸ್ಟ್ 16ರಿಂದ ಸೆಪ್ಟಂಬರ್ 5ರ ತನಕ ಯೋಗ ಶಿಬಿರ ಹಾಗೂ ಪ್ರವಚನವನ್ನು, ಸಿಂದಗಿಯ ಯೋಗೋತ್ಸವ ಸಮಿತಿಯಿಂದ ಆಯೋಜಿಸಲಾಗಿದೆ

Nagesh Talawar
ಯೋಗ ಶಿಬಿರ, ಪ್ರವಚನದ ಸದುಪಯೋಗ ಪಡೆದುಕೊಳ್ಳಿ: ಅಶೋಕ ಅಲ್ಲಾಪೂರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ಎಚ್.ಜಿ ಹೈಸ್ಕೂಲ್ ಮೈದಾನದಲ್ಲಿ ಆಗಸ್ಟ್ 16ರಿಂದ ಸೆಪ್ಟಂಬರ್ 5ರ ತನಕ ಯೋಗ ಶಿಬಿರ ಹಾಗೂ ಪ್ರವಚನವನ್ನು, ಸಿಂದಗಿಯ ಯೋಗೋತ್ಸವ ಸಮಿತಿಯಿಂದ ಆಯೋಜಿಸಲಾಗಿದೆ ಎಂದು ಸದಸ್ಯ ಅಶೋಕ ಅಲ್ಲಾಪೂರ ಹೇಳಿದರು. ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಜಾನೆ 5.30ರಿಂದ 6.30ರ ತನಕ ಯೋಗ, ಸಂಜೆ 7ರಿಂದ 8 ಗಂಟೆಗೆ ಪ್ರವಚನ ನಡೆಯಲಿದೆ. ನಿರಂಜನ ಶ್ರೀಗಳು ಯೋಗ ಶಿಬಿರ ಹಾಗೂ ಪ್ರವಚನ ನಡೆಸಿಕೊಡಲಿದ್ದಾರೆ. ಇದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು.

ಆಗಸ್ಟ್ 16ರಂದು ಮುಂಜಾನೆ 5.30 ಶಿಬಿರದ ಉದ್ಘಾಟನೆ ನಡೆಯಲಿದೆ. ಸಾರಂಗಮಠ-ಗಚ್ಚಿನಮಠದ ಪ್ರಭು ಸಾರಂಗದೇವ ಶಿವಾಚಾರ್ಯರು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಯೋಗೋತ್ಸವ ಸಮಿತಿ ಅಧ್ಯಕ್ಷರಾದ ಮಹಾಂತೇಶ ಪಟ್ಟಣಶೆಟ್ಟಿ ಉಪಸ್ಥಿತಿ ಇರಲಿದ್ದಾರೆ. ಸಂಜೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಪ್ರವಚನಕ್ಕೆ ಚಾಲನೆ ಸಿಗಲಿದೆ. ಇದರ ಸದುಪಯೋಗವನ್ನು ಸಿಂದಗಿ ಪಟ್ಟಣದ ಹಾಗೂ ತಾಲೂಕಿನ ಸುತ್ತಲಿನ ಗ್ರಾಮಗಳ ಜನರು ಪಡೆದುಕೊಳ್ಳಬೇಕು. ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ನಮ್ಮ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಗಾಗಿ ಇದರಲ್ಲಿ ಎಲ್ಲರು ಭಾಗವಹಿಸಬೇಕು ಅಂತಾ ಹೇಳಿದರು.

ಈ ವೇಳೆ ಯೋಗೋತ್ಸವ ಸಮಿತಿ ಅಧ್ಯಕ್ಷರಾದ ಮಹಾಂತೇಶ ಪಟ್ಟಣಶೆಟ್ಟಿ, ಪ್ರಾಧ್ಯಾಪಕರಾದ ಡಾ.ಅರವಿಂದ ಮನಗೂಳಿ, ಸಮಿತಿ ಸದಸ್ಯರಾದ ಶ್ರೀಶೈಲಗೌಡ ಬಿರಾದಾರ, ಬಸವರಾಜ ಕಕ್ಕಳಮೇಲಿ, ಸುರೇಶ ಪೂಜಾರಿ, ಎಂ.ಎಂ ಹಂಗರಗಿ, ರಾಜು ನರಗೋಧಿ, ಎಂ.ಎ ಖತೀಬ, ಆನಂದ ಶಾಬಾದಿ, ಶಿವಕುಮಾರ ಶಿವಸಿಂಪಗಿ, ಅಂಬರೀಶ ಬಿರಾದಾರ, ಮುತ್ತು ಪಟ್ಟಣಶೆಟ್ಟಿ, ಸಂಗು ಬಿರಾದಾರ, ಮಹಾನಂದ ಬಮ್ಮಣ್ಣಿ, ಪ್ರತಿಭಾ ಚಳ್ಳಗಿ, ಸೀಮಾ ವಾರದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article