ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): 2024ನೇ ಸಾಲಿನ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಮಸೂದೆಯನ್ನು(Motor Vehicle Taxation) ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಮಂಡಿಸಲಾಗಿದೆ. ವಿಪಕ್ಷಗಳ ವಿರೋಧದ ನಡುವೆಯೂ ಈ ಮೂಸದೆ ಮಂಡಿಸಲಾಗಿದೆ. ಇದರಿಂದಾಗಿ ಹೊಸದಾಗಿ ಬೈಕ್(Bike) ಖರೀದಿಸುವ ಗ್ರಾಹಕರು ನೋಂದಣಿ ಸಂದರ್ಭದಲ್ಲಿ ಹೆಚ್ಚುವರಿ ಸೆಸ್ ವಿಧಿಸುವುದು ಇದರ ಉದ್ದೇಶವಾಗಿದೆ. ಧ್ವನಿ ಮತದ ಮೂಲಕ 2ನೇ ತಿದ್ದುಪಡಿಯನ್ನು ಮಂಡಿಸಲಾಗಿದೆ.
ಈಗಾಗಲೇ ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಇಡಾಗಿದ್ದಾರೆ. ಬೈಕ್ ಖರೀದಿಸುವವರು ಹೆಚ್ಚಾಗಿ ಬಡವರು, ಮಧ್ಯಮ ವರ್ಗದವರು. ಅವರಿಗೆ ಮತ್ತೆ ತೆರಿಗೆ ವಿಧಿಸುವುದು ಯಾವ ನ್ಯಾಯ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಇದಕ್ಕೆ ಸಮರ್ಥನೆ ನೀಡಿದ ಸಚಿವ ಹೆಚ್.ಕೆ ಪಾಟೀಲ, ಒಂದು ಬಾರಿ ನೀಡುವ ತೆರಿಗೆಯ ಹಣವನ್ನು ಕರ್ನಾಟಕ ಮೋಟಾರು ಸಾರಿಗೆ, ಅಲೈಡ್ ವರ್ಕರ್ಸ್ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ನಿಧಿಗೆ ಬಳಸಲಾಗುವುದು ಎಂದರು.