ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಚಾಂದಕವಠೆಯ ಶ್ರೀ ಪರಮಾನಂದ ಪ್ರೌಢ ಶಾಲೆ ಹಿಂದಿ ಶಿಕ್ಷಕ ಎಲ್.ಮಾರಣ್ಣ ಅವರು ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸೆಪ್ಟೆಂಬರ್ 17 ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆ ಶಾಲೆಯಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
2003ರಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿದ ಎಲ್.ಮಾರಣ್ಣ ಅವರು ನಿರಂತರ 21 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದರು. ವೃತ್ತಿಯ ಬಗ್ಗೆ ಸಾಕಷ್ಟು ಪ್ರೀತಿ, ಒಲವು ಹೊಂದಿದ್ದರು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿರುವುದು ನೋವು ತಂದಿದೆ ಎಂದು ಅವರ ಸಹದ್ಯೋಗಿ ಮಿತ್ರರು ಹೇಳಿದ್ದಾರೆ. ಮೃತರಿಗೆ ಒಬ್ಬ ಮಗ ಹಾಗೂ ಒಬ್ಬಳು ಮಗಳಿದ್ದು, ಬಂಧು ಬಳಗ ಹಾಗೂ ಅಪಾರ ಶಿಷ್ಯರನ್ನು ಬಳಗವನ್ನು ಅಗಲಿದ್ದಾರೆ.