ಪ್ರಜಾಸ್ತ್ರ ಸುದ್ದಿ
ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ರೋಚಕವಾಗಿ ಗೆಲುವು ಸಾಧಿಸುವ ಮೂಲಕ 2-2ರಲ್ಲಿ ಸರಣಿಯಲ್ಲಿ ಸಮಬಲ ಮಾಡಿಕೊಂಡಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದ್ದಾರೆ. ಪಂದ್ಯ ಬಹುತೇಕ ಇಂಗ್ಲೆಂಡ್ ಪರವಾಗಿತ್ತು. ಸರಣಿಯನ್ನು ಸೋಲುತ್ತೆ ಎಂದು ಎಲ್ಲರೂ ನಿರಾಸೆಗೊಂಡಿದ್ದರು. ಆದರೆ, ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ದಾಳಿಗೆ ಫಲಿತಾಂಶ ಭಾರತ ಕಡೆ ತಿರುಗಿತು.
ಭಾರತ ನೀಡಿದ್ದ 374 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ 367 ರನ್ ಗಳಿಸಿ ಆಲೌಟ್ ಆಗುವ ಮೂಲಕ ಸೋಲು ಕಂಡಿತು. 6 ರನ್ ಗಳಿಂದ ಭಾರತ ರೋಚಕ ಗೆಲುವು ದಾಖಲಿಸಿತು. ಮೊಹಮ್ಮದ್ ಸಿರಾಜ್ 5, ಪ್ರಸದ್ಧ್ ಕೃಷ್ಣ 4 ವಿಕೆಟ್ ಪಡೆದು ತಂಡಕ್ಕೆ ಗೆಲುವಿನ ಉಡುಗರೆ ನೀಡಿದರು. ಆಕಾಶ್ ದೀಪ್ 1 ವಿಕೆಟ್ ಪಡೆದರು.
ಇಂಗ್ಲೆಂಡ್ ತಂಡದ ರೂಟ್ 105, ಬ್ರೂಕ್ 111 ರನ್ ಗಳಿಸಿ 195 ರನ್ ಗಳ ಜೊತೆಯಾಟವಾಡಿದರು. ಇವರ ಆಟ ನೋಡಿದ ಪ್ರತಿಯೊಬ್ಬರು ಇಂಗ್ಲೆಂಡ್ ಗೆಲುವು ಸಾಧಿಸುತ್ತೆ ಎಂದುಕೊಂಡಿದ್ದರು. ಆದರೆ, ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ಎಲ್ಲವನ್ನು ಉಲ್ಟಾ ಮಾಡುವ ಮೂಲಕ ಭಾರತದ ಪಾಲಿಗೆ ಹೀರೋ ಆದರು. ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಇವರಿಬ್ಬರ ಬೌಲಿಂಗ್ ಮೋಡಿ ಮಾಡಿತು. ಇಂಗ್ಲೆಡಿನ ಹ್ಯಾರಿ ಬ್ರೂಕ್ ಪ್ಲೇಯರ್ ಆಫ್ ದಿ ಸಿರೀಸ್ ಆದರು. ಭಾರತದ ಮೊಹಮ್ಮದ್ ಸಿರಾಜ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.