ಪ್ರಜಾಸ್ತ್ರ ಸುದ್ದಿ
ಓವಲ್(Oval): ಆಡಿಲೇಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 180 ರನ್ ಗಳಿಗೆ ಆಲೌಟ್ ಆಗಿದೆ. ಆಸೀಸ್ ಅನುಭವಿ ಬೌಲರ್ ಮಿಚೆಲ್ ಸ್ಟಾರ್ಕ್ ಬೌಲಿಂಗ್ ದಾಳಿಗೆ ಭಾರತದ ಬ್ಯಾಟಿಂಗ್ ಪಡೆ ಕುಸಿದಿದೆ. ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ 42 ರನ್, ಕೆ.ಎಲ್ ರಾಹುಲ್ 37, ಶುಭನಂ ಗಿಲ್ 31 ರನ್ ಬಿಟ್ಟರೆ ಉಳಿದವರು ಹೀಗೆ ಬಂದು ಹಾಗೇ ಹೋದರು.
ಆಸ್ಟ್ರೇಲಿಯಾ ಬೌಲರ್ ಮಿಚೆಲ್ ಸ್ಟಾರ್ಕ್ 14.1 ಓವರ್ ಗಳಲ್ಲಿ 48 ರನ್ ಕೊಟ್ಟು ಬರೋಬ್ಬರಿ 6 ವಿಕೆಟ್ ಪಡೆದು ಸಂಭ್ರಮಿಸಿದರು. ಜೈಸ್ವಾಲ್, ಕೊಹ್ಲಿ, ಕೆ.ಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ರವಿಚಂದ್ರನ್ ಅಶ್ವಿನ್, ಹರ್ಷಿತ್ ರಾಣಾ ಸೇರಿ ಪ್ರಮುಖ ಆಟಗಾರರ ವಿಕೆಟ್ ಪಡೆದು ಭಾರತವನ್ನು 180 ರನ್ ಗಳ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಆಸ್ಟ್ರೇಲಿಯಾ ಇನ್ನಿಂಗ್ಸ್ ಶುರು ಮಾಡಿದ್ದು, 76 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. ಬೂಮ್ರಾ ಉಸ್ಮಾನ್ ಖವಾಜ್ ವಿಕೆಟ್ ಪಡೆದಿದ್ದಾರೆ.