ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಭಾರತ ಹಾಗೂ ನ್ಯೂಜಿಲೆಂಡ್ ನಡುವೆ 3 ಟೆಸ್ಟ್ ಪಂದ್ಯಗಳ ಸರಣಿ ಬುಧವಾರದಿಂದ ಶುರುವಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅತ್ಯಂತ ಕಳಪೆ ಆಟವಾಡಿದೆ. ಕೇವಲ 46 ರನ್ ಗಳಿಗೆ ಆಲೌಟ್ ಆಗುವ ಮೂಲಕ ಕ್ರಿಕೆಟ್ ಪ್ರೇಮಿಗಳ ಜೊತೆಗೆ ದಿಗ್ಗಜರಿಂದಲೂ ಟೀಕೆಗಳ ಸುರಿಮಳೆಯಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 31.2 ಓವರ್ ಗಳಲ್ಲಿ 46 ರನ್ ಗಳಿಗೆ ಆಲೌಟ್ ಆಗಿದೆ. 2020ರಲ್ಲಿ ಆಡಿಲೇಟ್ ಟೆಸ್ಟ್ ಪಂದ್ಯದಲ್ಲಿ 36 ರನ್ ಗಳಿಗೆ ಸರ್ವಪತನ ಕಂಡಿರುವುದು ಕನಿಷ್ಠ ರನ್ ಆಗಿದೆ.
ರಿಷಬ್ ಪಂತ್ 20, ಯುವ ಆಟಗಾರ ಜೈಸ್ವಾಲ್ 13 ರನ್ ಗಳಿಸಿದ್ದಾರೆ. ನಾಯಕ ರೋಹಿತ್ ಶರ್ಮಾ 2, ವಿರಾಟ್ ಕೊಹ್ಲಿ 0, ಸರ್ಫರಾಜ್ ಖಾನ್ 0, ಕೆ.ಎಲ್ ರಾಹುಲ್ 0, ಜಡೇಜಾ 0, ಅಶ್ವಿನ್ 0, ಕುಲ್ದೀಪ್ ಯಾದವ್ 2, ಬೂಮ್ರಾ 1, ಶೆಮಿ 4 ರನ್ ಗಳಿಸಿದ್ದಾರೆ. ಐವರು ಆಟಗಾರರು ಶೂನ್ಯಕ್ಕೆ ಔಟ್ ಆಗುವ ಮೂಲಕ ಕಳಪೆ ಪ್ರದರ್ಶನ ನೀಡಿದೆ. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ 5, ವಿಲ್ ಓರಕ್ 4 ವಿಕೆಟ್ ಪಡೆದು ಮಿಂಚಿದರು. ಟಿಮ್ ಸೌಥಿ 1 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ಆಡುತ್ತಿರುವ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿದೆ. ನಾಯಕ ಟಾಮ್ ಲಥಿಮ್ 15, ಡೆವೊನ್ ಕಾನ್ ವೇ 91, ವಿಲ್ ಯಂಗ್ 33 ರನ್ ಗಳಿಸಿ ಔಟ್ ಆಗಿದ್ದಾರೆ. ರಚಿನ್ ರವಿಂದ್ರ 22, ಡ್ರೈಲ್ ಮಿಚಲ್ 14 ರನ್ ಗಳೊಂದಿಗೆ ಆಟವಾಡುತ್ತಿದ್ದಾರೆ. ಭಾರತದ ಪರ ಯಶ್ವಿನ್, ಕುಲ್ದೀಪ್, ಜಡೇಜಾ ತಲಾ 1 ವಿಕೆಟ್ ಪಡೆದಿದ್ದಾರೆ.