ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ನಲ್ಲಿ ಮೈಕೆಡವಿಕೊಂಡು ಎದ್ದು ನಿಂತಿದೆ. 402 ರನ್ ಗಳಿಗೆ ಆಲೌಟ್ ಆಗುವ ಮೂಲಕ 356 ರನ್ ಗಳ ಮುನ್ನಡೆ ಸಾಧಿಸಿತು. ರಚಿನ್ ರವೀಂದ್ರ 134, ಕಾನ್ವೆ 91, ಬೌಲರ್ ಥಿಮ್ ಸೌಥಿ 61 ರನ್ ಗಳ ಆಟದಿಂದಾಗಿ 400 ರನ್ ಗಳ ಗಡಿ ದಾಟಿತು. ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 46 ರನ್ ಗಳಿಗೆ ಆಲೌಟ್ ಆಗಿ ಎಲ್ಲರಿಂದ ಟೀಕೆಗೆ ಒಳಗಾಗಿದ್ದ ರೋಹಿತ್ ಶರ್ಮಾ ಪಡೆ 2ನೇ ಇನ್ನಿಂಗ್ಸ್ ನಲ್ಲಿ ಬ್ಯಾಟ್ ಬೀಸುತ್ತಿದೆ.
ಯಶಸ್ವಿ ಜೈಸ್ವಾಲ್ 35, ರೋಹಿತ್ ಶರ್ಮಾ 52, ವಿರಾಟ್ ಕೊಹ್ಲಿ 70 ರನ್ ಗಳಿಸಿ ಔಟ್ ಆಗಿದ್ದಾರೆ. ಸರ್ಫರಾಜ್ ಖಾನ್ 70 ರನ್ ಗಳಿಸಿ ಆಟ ಮುಂದುವರೆಸಿದ್ದಾರೆ. 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿದ್ದು, ಇನ್ನು 125 ರನ್ ಬಾರಿಸಿ ಟಾರ್ಗೆಟ್ ನೀಡಬೇಕಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಐವರು ಶೂನ್ಯಕ್ಕೆ ಔಟ್ ಆಗಿದ್ದರು. ಇದೀಗ ಸರ್ಫರಾಜ್ ಖಾನ್ ಅಜೇಯ 70 ರನ್ ಗಳೊಂದಿಗೆ ಮೂವರು ಅರ್ಧಶತಕ ಬಾರಿಸಿದ್ದಾರೆ.