ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 2-0ದಿಂದ ವಶ ಪಡೆಸಿಕೊಂಡಿದೆ. ಪ್ರವಾಸಿ ತಂಡ ನೀಡಿದ್ದ 121 ರನ್ ಗಳ ಗುರಿಯನ್ನು ಭಾರತ ತಲುಪುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಕೆ.ಎಲ್ ರಾಹುಲ್ ಅಜೇಯ 58 ರನ್, ಸಾಯಿ ಸುದರ್ಶನ್ 39 ರನ್ ಬಾರಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ 175 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ 8, ನಾಯಕ ಶುಭನಂ ಗಿಲ್ 13 ರನ್ ಗಳಿಸಿ ಔಟ್ ಆದರು. ಧ್ರುವ್ ಅಜೇಯ 6 ರನ್ ಗಳಿಸಿದರು. ವೆಸ್ಟ್ ವಿಂಡೀಸ್ ಪರ ನಾಯಕ ರೋಸ್ಟನ್ 2 ವಿಕೆಟ್ ಹಾಗೂ ವಾರಿಕಾನ್ 1 ವಿಕೆಟ್ ಪಡೆದರು. ರವೀಂದ್ರ ಜಡೇಜಾ ಪ್ಲೇಯರ್ ಆಫ್ ದಿ ಸಿರೀಸ್ ಆದರು. ಕುಲ್ದೀಪ್ ಯಾದವ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.