ಪ್ರಜಾಸ್ತ್ರ ಸುದ್ದಿ
ಓವಲ್(Oval): ಇಲ್ಲಿನ ಆಡಿಲೇಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ 2ನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 337 ರನ್ ಗಳಿಗೆ ಆಲೌಟ್ ಆಗಿದೆ. ಟ್ರಾವಿಸ್ ಹೆಡ್ ಭರ್ಜರಿ 140 ರನ್, ಮಾರ್ನಸ್ 64 ಆಟದಿಂದಾಗಿ 300ರ ಗಡಿ ದಾಟಿದೆ. ಟೀಂ ಇಂಡಿಯಾ ಪರ ಬೂಮ್ರಾ, ಸಿರಾಜ್ ತಲಾ 4 ವಿಕೆಟ್ ಪಡೆಯುವ ಮೂಲಕ ಸಂಭ್ರಮಿಸಿದರು. ನಿತೀಶ್ ಕುಮಾರ್ ರೆಡ್ಡಿ, ಅಶ್ವಿನ್ ತಲಾ 1 ವಿಕೆಟ್ ಪಡೆದರು.
ಆಡಿಲೇಡ್ ಸ್ಟೇಡಿಯಂನಲ್ಲಿ 3ನೇ ಶತಕ ಬಾರಿಸಿದ ಟ್ರಾವಿಸ್ ಹೆಡ್ ಲೆಜೆಂಡ್ ಬ್ರಾಡಮನ್ ದಾಖಲೆಯನ್ನು ಸರಿಗಟ್ಟಿದ್ದರು. ಆದರೆ ಇಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರು ಮೈಕಲ್ ಕ್ಲಾರ್ಕ್. 10 ಪಂದ್ಯಗಳಲ್ಲಿ 7 ಶತಕ ಸಿಡಿಸಿದ್ದಾರೆ.
ಇನ್ನು ಇದರೊಂದಿಗೆ ಆಸೀಸ್ ಪಡೆ 157 ರನ್ ಗಳ ಮುನ್ನಡೆ ಸಾಧಿಸಿದೆ. ಇದನ್ನು ಬೆನ್ನು ಹತ್ತಿದ ರೋಹಿತ್ ಶರ್ಮಾ ಬಳಗ 128 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಮತ್ತೆ ಸಂಕಷ್ಟಕ್ಕೆ ಸಿಕ್ಕಿದೆ. ನಾಯಕ ಪಾಟ್ ಕಮಿನ್ಸ್, ಸ್ಕಾಟ್ ತಲಾ 2 ವಿಕೆಟ್ ಪಡೆದರೆ, ಸ್ಟಾರ್ಕ್ 1 ವಿಕೆಟ್ ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಡಕ್ ಔಟ್ ಆಗಿದ್ದ ಜೈಸ್ವಾಲ್ 24, ಕೆ.ಎಲ್ ರಾಹುಲ್ 7, ಗಿಲ್ 28, ಕೊಹ್ಲಿ 11, ನಾಯಕ ರೋಹಿತ್ ಶರ್ಮಾ 6 ರನ್ ಗಳಿಗೆ ಔಟ್ ಆಗುವ ಮೂಲಕ ಪ್ರಮುಖ 5 ವಿಕೆಟ್ ಗಳು ಉರುಳಿವೆ. ಹೀಗಾಗಿ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದೆ. ಪಂತ್ 28, ನಿತೀಶ್ ಕುಮಾರ್ ರೆಡ್ಡಿ 16 ರನ್ ಗಳೊಂದಿಗೆ ಕ್ರಿಸ್ ನಲ್ಲಿದ್ದಾರೆ.