ಪ್ರಜಾಸ್ತ್ರ ಸುದ್ದಿ
ದುಬೈ(Dubai): ಏಷ್ಯ ಕಪ್ ಟಿ-20 ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಮಂಗಳವಾರ ಪಂದ್ಯ ನಡೆದಿದೆ. 7 ವಿಕೆಟ್ ಅಂತರದಿಂದ ಭಾರತ ಗೆಲುವು ಸಾಧಿಸಿದೆ. ಈ ವೇಳೆ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನದ ಆಟಗಾರರಿಗೆ ಹಸ್ತಲಾಘವ ನೀಡಿಲ್ಲ. ಈ ಮೂಲಕ ಕ್ರೀಡಾಸ್ಪೂರ್ತಿ ಮರೆತಿದ್ದಾರೆ ಎಂದು ಪಾಕ್ ಇದೀಗ ಅಧಿಕೃತ ಪ್ರಕಟಣೆ ದಾಖಲಿಸಿದೆ.
ಏಷ್ಯ ಕ್ರಿಕೆಟ್ ಮಂಡಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧಿಕೃತ ದೂರು ದಾಖಲಿಸಿದೆ. ಕ್ರೀಡಾಸ್ಪೂರ್ತಿಯನ್ನು ಭಾರತ ಮೆರೆದಿಲ್ಲ. ಇದರಿಂದ ಎರಡು ದೇಶಗಳ ನಡುವೆ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸುವಂತೆ ಮಾಡಿದೆ ಎಂದು ಹೇಳಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ವೇಳೆ ಹಾಗೂ ಪಂದ್ಯ ಮುಗಿದ ಬಳಿಕ ಹಸ್ತಲಾಘವ ನೀಡಲು ಭಾರತೀಯ ಆಟಗಾರರು ನಿರಾಕರಿಸಿದ್ದರು. ಇದನ್ನು ಟೀಂ ಇಂಡಿಯಾ ನಾಯಕ ಸೂರ್ಯಕುಮಾರ ಯಾದವ್ ಸಮರ್ಥಿಸಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧ ಭಾರತ ಇನ್ನು ಎರಡು ಪಂದ್ಯಗಳನ್ನು ಆಡಬೇಕಿದೆ.