ಪ್ರಜಾಸ್ತ್ರ ಸುದ್ದಿ
ದೆಹಲಿ(Delhi): ಇಲ್ಲಿನ ಅರುಣ್ ಜೇಟ್ಲಿ ಸೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ 2 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿದೆ. ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅಜೇಯ 173 ರನ್ ಗಳಿಸಿದ್ದಾರೆ. ಸಾಯಿ ಸುದರ್ಶನ್ 87 ರನ್ ಗಳಿಸಿ ಔಟ್ ಆದರು. ಕೆ.ಎಲ್ ರಾಹುಲ್ 38 ರನ್ ಗಳಿಸಿ ನಿರಾಸೆ ಮೂಡಿಸಿದರು. ಶುಭನಂ ಗಿಲ್ 20 ರನ್ ಗಳೊಂದಿಗೆ ನಾಳೆಗೆ ಆಟ ಕಾಯ್ದಿರಿಸಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಪರ ಜೊಮೆಲ್ ವಾರಿಕಾನ್ 2 ವಿಕೆಟ್ ಪಡೆದಿದ್ದಾರೆ. ಗುಜರಾತಿನ ಅಹ್ಮದಾಬಾದ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಜಯ ಸಾಧಿಸಿದೆ.