ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ಇಲ್ಲಿನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆಡಿದ ಭಾರತ 376 ರನ್ ಗಳಿಗೆ ಆಲೌಟ್ ಆಯಿತು. ಗುರುವಾರದ ಆಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿತ್ತು. ಇಂದು ಆಟ ಮುಂದುವರೆಸಿದೆ ಅಶ್ವಿನ್ 113, ಜಡೇಜಾ 86 ರನ್ ಗಳಿಗೆ ಔಟ್ ಆದರು. ಆಕಾಶ್ ದೀಪ್ 17, ಬೂಮ್ರಾ 7 ರನ್ ಗಳಿಗೆ ಔಟ್ ಆಗುವುದರೊಂದಿಗೆ 376 ರನ್ ಗಳಿಸಿತು. ಶತಕದ ಸಾಧನೆ ಮಾಡಿರುವ ಅಶ್ವಿನ್, ಶಕೀಬ್ ಅಲ್ ಹಸನ್ ಬೌಲಿಂಗ್ ನಲ್ಲಿ 6 ಬೌಲ್ ಗಳಲ್ಲಿ 6 ಸಿಕ್ಸ್ ಸಿಡಿಸಿ ಮತ್ತೊಂದು ದಾಖಲೆ ಮಾಡಿದರು. ಈ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಆಡಿದರು.
ಮೊದಲ ಇನ್ನಿಂಗ್ಸ್ ಶುರು ಮಾಡಿದ ಬಾಂಗ್ಲಾ ಪಡೆಯನ್ನು ಭಾರತೀಯ ಬೌಲರ್ ಗಳು ಕಾಡಿದರು. ನಜ್ಮುಲ್ ಹುಸೈನ್ ಸ್ಯಾಂಟೋ ಟೀಂ ಹೀಗೆ ಬಂದು ಹಾಗೇ ಹೋಯಿತು. ಮಯಿದ್ ಹಸನ್ 27, ಲಿಟನ್ ದಾಸ್ 22, ನಾಯಕ ಸ್ಯಾಂಟೋ 20 ರನ್ ಗಳಿಗೆ ಗರಿಷ್ಠ ಸ್ಕೋರ್ ಆಗಿದೆ. ಬೂಮ್ರಾ 11 ಓವರ್ ಗಳಲ್ಲಿ 50 ರನ್ ನೀಡಿ ಭರ್ಜರಿ 4 ವಿಕೆಟ್ ಪಡೆದು ಮಿಂಚಿದರು. ಜಡೇಜಾ 2, ಆಕಾಶ್ ದೀಪ್ 2, ಸಿರಾಜ್ 1 ವಿಕೆಟ್ ಪಡೆದರು. ಹೀಗಾಗಿ 47.1 ಓವರ್ ಗಳಲ್ಲ ಬಾಂಗ್ಲಾ 149 ರನ್ ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ 227 ರನ್ ಗಳ ಹಿನ್ನಡೆ ಅನುಭವಿಸಿದೆ.