ಪ್ರಜಾಸ್ತ್ರ ಸುದ್ದಿ
ಎಡ್ಜ್ ಬ್ಯಾಸ್ಟನ್(Edgbaston): ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಇಂಗ್ಲೆಂಡ್ ಗೆ ಬರೋಬ್ಬರಿ 608 ರನ್ ಗಳ ಗುರಿಯನ್ನು ಭಾರತ ನೀಡಿತ್ತು. ಈ ಟಾರ್ಗೆಟ್ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 271 ರನ್ ಗಳಿಗೆ ಸರ್ವಪತನ ಕಂಡಿತು. ಯುವ ಬೌಲರ್ ಆಕಾಶ್ ದೀಪ್ 6 ವಿಕೆಟ್ ಪಡೆಯುವ ಮೂಲಕ ಆಂಗ್ಲರನ್ನು ಕಾಡಿದರು.
ಜಮೈ ಸ್ಮಿತ್ 88 ರನ್ ಗಳನ್ನು ಬಿಟ್ಟರೆ ಉಳಿದವರಿಂದ ಹೆಚ್ಚು ರನ್ ಗಳು ಬರಲಿಲ್ಲ. ನಾಯಕ ಬೆನ್ ಸ್ಟೋಕ್ಸ್ 33, ಬೆನ್ ಡಕೆಟ್ 25, ಪೊಪೆ 24, ಬ್ರೈಡೆನ್ ಕ್ರೆಸ್ 38 ರನ್ ಗಳಿಸಿದರು. ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಜಡೇಜಾ ಹಾಗೂ ವಾಸಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ನಲ್ಲಿ 269 ಹಾಗೂ 2ನೇ ಇನ್ನಿಂಗ್ಸ್ ನಲ್ಲಿ 161 ರನ್ ಗಳಿಸಿದ್ದ ಟೀಂ ಇಂಡಿಯಾ ನಾಯಕ ಶುಭನಂ ಗಿಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪಡೆದರು.