ಪ್ರಜಾಸ್ತ್ರ ಸುದ್ದಿ
ಕಾನ್ಪುರ್(Kanpur): ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಅಂತರದಿಂದ ಗೆಲ್ಲುವ ಮೂಲಕ 2 ಪಂದ್ಯ ಸರಣಿಯನ್ನು 2-0 ಲೀಡ್ ನಲ್ಲಿ ಗೆಲುವು ಸಾಧಿಸಿದೆ. ಮೊದಲ 2 ದಿನ ಮಳೆಯಿಂದಾಗಿ ಪಂದ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಹೀಗಿದ್ದರೂ ಭಾರತ ಗೆಲುವಿನ ಲೆಕ್ಕಾಚಾರದ ಆಟವಾಡಿ ಅದರಲ್ಲಿ ಯಶಸ್ವಿಯಾಗಿದೆ. 2ನೇ ಇನ್ನಿಂಗ್ಸ್ ನಲ್ಲಿ 146 ರನ್ ಗಳಿಗೆ ಆಲೌಟ್ ಬಾಂಗ್ಲಾ 95 ರನ್ ಗಳ ಟಾರ್ಗೆಟ್ ನೀಡಿತ್ತು. ಇದನ್ನು 3 ವಿಕೆಟ್ ಕಳೆದುಕೊಂಡು ಭಾರತ ಮುಟ್ಟಿತು.
ಜೈಸ್ವಾಲ್ 51, ಕೊಹ್ಲಿ ಅಜೇಯ 29, ಪಂತ್ ಅಜೇಯ 4 ರನ್ ಗಳನ್ನು ಬಾರಿಸಿದರು. ನಾಯಕ ರೋಹಿತ್ 8, ಗಿಲ್ 6 ರನ್ ಗಳಿಗೆ ಔಟ್ ಆದರು. ಬಾಂಗ್ಲಾ ಮಿರ್ಜಾ 2, ಇಸ್ಲಾಂ 1 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ 72, 2ನೇ ಇನ್ನಿಂಗ್ಸ್ ನಲ್ಲಿ 51 ರನ್ ಗಳಿಸಿದ ಜೈಸ್ವಾಲ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಅನುಭುವಿ ಬೌಲರ್ ರವಿಚಂದ್ರನ್ ಅಶ್ವಿನ್ ಅದ್ಬುತ ಆಟದಿಂದಾಗಿ ಪ್ಲೇಯರ್ ಆಫ್ ದಿ ಸೀರಿಸ್ ಆದರು.