ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ನಟ ಶಿವರಾಜಕುಮಾರ್ ಅವರ ಜೀವನಾಧರಿತ ಸಾಕ್ಷ್ಯಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಪ್ರದೀಪ್ ಕೆ ಶಾಸ್ತ್ರಿ ಎಂಬುವರು ಬರೆದು ನಿರ್ದೇಶನ ಮಾಡಿದ್ದಾರೆ. ಗೀತಾ ಶಿವರಾಜಕುಮಾರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಇದರಲ್ಲಿ ನಟ ಶಿವರಾಜಕುಮಾರ್ ಅವರು ನಡೆದು ಬಂದ ಹಾದಿಯ ಬಗ್ಗೆ ಹೇಳಲಾಗಿದೆ. ಈ ಬಗ್ಗೆ ಸ್ವತಃ ಶಿವಣ್ಣ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಗುಣಮುಖನಾಗಿ ನಿಮ್ಮೆಲ್ಲರ ಬಳಿ ಬಂದ ದಿನಕ್ಕೆ ಒಂದು ವರುಷ. ನಿಮ್ಮ ಪ್ರೀತಿ ಹಾರೈಕೆಗೆ ನಾನು ಸದಾ ಋಣಿ. ನಾಳೆ ಸರ್ವೈವರ್ ಡ್ಯಾಕ್ಯುಮೆಂಟರಿಯ ಒಂದು ಸಣ್ಣ ತುಣುಕು ನಿಮ್ಮ ಮುಂದೆ ಬರಲಿದೆ. ನೋಡಿ ಹರಸಿ ಹಾರೈಸಿ ಎಂದು ಭಾನುವಾರ ಪೋಸ್ಟ್ ಮಾಡಿದ್ದರು.




