ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಇಂಜಿನಿಯರಿಂಗ್ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳ ಪ್ರತಿಭೆಯನ್ನು ಹೊರಹೊಮ್ಮಿಸಲು ಸಿಕ್ಯಾಬ್ ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ 2024 ಡಿಸೆಂಬರ್ 6 ಮತ್ತು 7ರಂದು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಎಲ್ಲ ಸ್ಪರ್ಧೆಗಳ ಬಹುಮಾನ ಮೊತ್ತವು ಒಂದು ಲಕ್ಷಕ್ಕೂ ಅಧಿಕವಾಗಿದ್ದು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಟ್ರೋಫಿ ಕೂಡಾ ನೀಡಲಾಗುವುದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ಎರಡು ದಿನಗಳ ಕಾಲ ನಡೆಯುವ ಈ ಪ್ರತಿಭಾ ಪ್ರದರ್ಶನ ಹಾಗೂ ಸ್ಪರ್ಧೆಗಳಲ್ಲಿ ಸರ್ಕಿಟ್ ವಿನ್ಯಾಸ, ರಸಪ್ರಶ್ನೆ,ನೀಟ್ ಹಾಗೂ ಜೆಇಇಇ ಪೂರ್ವ ಸಿದ್ಧತೆ, ತಾಂತ್ರಿಕ ಮಾದರಿ ಮಾಡುವುದು, ಭಿತ್ತಿ ಪತ್ರ, (ಫೋಸ್ಟರ್) ವ್ಯಾವಹಾರಿಕ ಕೌಶಲ್ಯ (ಶಾರ್ಕಟ್ಯಾಂಕ್), ದೋಷ ಪರಿಹಾರ (ಡಿಬಗ್ಗಿಂಗ್) ಹಾಗೂ ಐಡಿಯಾಥಾನ್ ದಂತಹ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿ ಸಿಕ್ಕ ವಿದ್ಯಾರ್ಥಿಗಳ ಉತ್ತಮ ಪ್ರತಿಕ್ರಿಯೆಯಿಂದ ಈ ಬಾರಿ ಇನ್ನೂ ಹೆಚ್ಚು ಉತ್ತಮ ರೀತಿಯಲ್ಲಿ ಈ ತಾಂತ್ರಿಕ ಸ್ಪರ್ಧೆ ಆಯೋಜಿಸಲು ನಿರ್ಧರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯೋಜಕರಾದ ಡಾ.ಎಸ್.ಎ. ಖಾದ್ರಿ ಅವರ ದೂರವಾಣಿ ಸಂಖ್ಯೆ (7019429104) ಹಾಗೂ ಪ್ರೊ.ಆಸಿಫ್ ದೊಡಮನಿ ದೂರವಾಣಿ ಸಂಖ್ಯೆ (8050633873) ಇವರನ್ನು ಸಂಪರ್ಕಿಸಲು ಪ್ರಾಂಶುಪಾಲರಾದ ಡಾ.ಅಬ್ಬಾಸ್ ಅಲಿ ತಿಳಿಸಿದ್ದಾರೆ.