ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಬಿಆರ್ ಎಸ್(BRS) ನಾಯಕಿ ಕೆ.ಕವಿತಾ ಅವರಿಗೆ ಜಾಮೀನು ನೀಡಿರುವ ಸಂಬಂಧ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನೀಡಿದ್ದ ಹೇಳಿಕೆಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು. ಹೀಗಾಗಿ ಇಂದು ಸುಪ್ರೀಂ ಕೋರ್ಟ್(Supreme Court) ಗೆ ಬೇಸರತ್ ಕ್ಷಮೆ ಕೇಳಿದ್ದಾರೆ. ನಾನು ನ್ಯಾಯಾಂಗ ಪ್ರಕ್ರಿಯೆಯಲ್ಲಿ ದೃಢ ನಂಬಿಕೆಯುಳ್ಳವನು. ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದೇನೆ ಎನ್ನುವ ರೀತಿಯಲ್ಲಿ ಭಾವನೆ ಮೂಡಿದೆ ಎಂದು ಹೇಳಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಮನೀಶ್ ಸಿಸೋಡಿಯಾ ಅವರಿಗೆ 15 ತಿಂಗಳ ಬಳಿಕ ಜಾಮೀನು ಸಿಕ್ಕಿದೆ. ಕೆ.ಕವಿತೆ ರೆಡ್ಡಿಯವರಿಗೆ 5 ತಿಂಗಳಲ್ಲ ಜಾಮೀನು(Bail) ಸಿಕ್ಕಿದೆ. ಬಿಜೆಪಿ ಜೊತೆಗೆ ಬಿಆರ್ ಎಸ್ ಸಂಧಾನದ ಫಲವಾಗಿ ಜಾಮೀನು ಸಿಕ್ಕಿದೆ ಎಂದು ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ. ಇದಕ್ಕೆ ಸುಪ್ರೀಂ ಕೋರ್ಟ್ ಛಾಟಿ ಬೀಸಿತು. ಇದರಿಂದಾಗಿ ಇಂದು ಕ್ಷಮೆ ಕೇಳಿದರು.