ಪ್ರಜಾಸ್ತ್ರ ಸುದ್ದಿ
ಹೈದರಾಬಾದ್(Hyderabad): ತೆಲುಗು ಸಿನಿ ದುನಿಯಾದ ಖ್ಯಾತ ಪೋಷಕ ನಟ, ಲೇಖಕ ಪೋಸಾನಿ ಕೃಷ್ಣ ಮುರುಳಿ( Posani Krishna Murali) ಅವರನ್ನು ಬಂಧಿಸಲಾಗಿದೆ. ಹೈದರಾಬಾದ್ ನಲ್ಲಿರುವ ಯಲ್ಲರೆಡ್ಡಿಗುಡಾದ ನ್ಯೂ ಸೈನ್ಸ್ ಕಾಲೋನಿ ಹತ್ತಿರದಲ್ಲಿನ ನಿವಾಸದಿಂದ ರಾತ್ರಿ 8.45ರ ಸುಮಾರಿಗೆ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಬಂಧನಕ್ಕೆ ಕಾರಣ ಏನು ಅನ್ನೋದರ ಸ್ಪಷ್ಟ ಮಾಹಿತಿ ದೊರಕಬೇಕಿದೆ.
ಬಿಎನ್ಎಸ್ ಕಾಯ್ದೆ 196, 353(2), 47(1) ಮತ್ತು (2) ಹಾಗೂ 111 ರೀಡ್ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ಇದು ಮುರುಳಿ ಅವರಿಗೆ ಪತ್ನಿಗೆ ನೀಡಿರುವ ನೋಟಿಸ್ ನಲ್ಲಿ ಸೂಚಿಸಲಾಗಿದೆ. ಇವರ ಮೇಲಿನ ಆರೋಪ ಜಾಮೀನು ರಹಿತವಾಗಿದ್ದು, ನ್ಯಾಯಾಲಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನಟ ಪೋಸಾನಿ ಕೃಷ್ಣ ಮುರುಳಿ ಅವರನ್ನು ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಲಾಗಿದೆ.