Ad imageAd image

ಅಮೃತಸರದಲ್ಲಿ ದೇವಸ್ಥಾನ ಸ್ಫೋಟ ಪ್ರಕರಣ: ಶಂಕಿತ ಆರೋಪಿ ಬಲಿ

Nagesh Talawar
ಅಮೃತಸರದಲ್ಲಿ ದೇವಸ್ಥಾನ ಸ್ಫೋಟ ಪ್ರಕರಣ: ಶಂಕಿತ ಆರೋಪಿ ಬಲಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚಂಡೀಗಢ(Chandigarh): ಅಮೃತಸರದಲ್ಲಿ(Amritsar) ಮಾರ್ಚ್ 15ರಂದು ಠಾಕೂರ್ ದ್ವಾರ ದೇವಸ್ಥಾನದ(Thakur Dwara Temple) ಹೊರಗೆ ಸ್ಫೋಟ ಸಂಭವಿಸಿದೆ. ಈ ಪ್ರಕರಣ ಶಂಕಿತ ಆರೋಪಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾನೆ. ಓರ್ವ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಗುಪ್ತಚರ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ರಾಜಾಸನ್ಸಿ ಎಂಬಲ್ಲಿ ಪತ್ತೆಯಾಗಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಶಂಕಿತನೊಬ್ಬ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪರಿಚಿತರಿಬ್ಬರು ಬೈಕ್ ನಲ್ಲಿ ಬಂದು ದೇವಸ್ಥಾನದ ಮುಂದೆ ಸ್ಫೋಟಕ ಎಸೆದು ಹೋಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಬಳಿಕ ಸ್ಥಳೀಯರಲ್ಲಿ ಆತಂಕ ಮೂಡಿದೆ.

WhatsApp Group Join Now
Telegram Group Join Now
Share This Article