ಪ್ರಜಾಸ್ತ್ರ ಸುದ್ದಿ
ಬಾಲ್ಕಿ(Baalki): ಬೀದರ ಜಿಲ್ಲೆಯ ಬಾಲ್ಕಿ ಹತ್ತಿರ ಬುಧವಾರ ಮುಂಜಾನೆ ಡಿಟಿಡಿಸಿ ವಾಹನ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ವೇಳೆ ಮೂವರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕಾಶಿನಾಥ್, ಪ್ರತಾಪ್ ಎಂಬುವರನ್ನು ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಚಪ್ಪ(25), ನವೀನ್(25) ಹಾಗೂ ನಾಗರಾಜ(40) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಇವರೆಲ್ಲರೂ ತೆಲಂಗಾಣ ಮೂಲದವರಾಗಿದ್ದಾರೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ ತಾಲೂಕಿನ ಜಗನಾಥಪುರ ಗ್ರಾಮದವರಾಗಿದ್ದು, ಕಲಬುರಗಿ ಜಿಲ್ಲೆಯ ಗಾಣಗಾಪುರ ದತ್ತಾತ್ರೇಯ ದೇಗುಲಕ್ಕೆ ದರ್ಶನಕ್ಕೆ ಬಂದಿದ್ದರು. ಹುಮನಾಬಾದ್ ಮಾರ್ಗವಾಗಿ ವಾಪಸ್ ಊರಿಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ. ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




