ಪ್ರಜಾಸ್ತ್ರ ಸುದ್ದಿ
ಬಲಚೂಸ್ಥಾನ(Balochistan): ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರು(terrorists) 23 ಜನರನ್ನು ಹತ್ಯೆ ಮಾಡಿದ ಘಟನೆ ಸೋಮವಾರ ನಡೆದಿದೆ. ಬಲೂಚಿಸ್ಥಾನದ ರಾರಶಮ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್ ನಿಲ್ಲಿಸಿದ್ದಾರೆ. ಗುರುತಿನ ಚಿಟಿ ಪರಿಶೀಲನೆ ನೆಪದಲ್ಲಿ 23 ಪ್ರಯಾಣಿಕರನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಅಂತರ್ ಪ್ರಾಂತಿಯ ಬಸ್, ಟ್ರಕ್ ಗಳನ್ನು ಗುರಿಯಾಗಿಸಿಕೊಂಡ ಇಂತಹದೊಂದು ಕೃತ್ಯವೆಸಗಿದ್ದಾರೆ.
ಇಷ್ಟು ಜನರನ್ನು ಹತ್ಯೆ(Killed) ಮಾಡಿರುವುದಲ್ಲದೆ 10ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಹೋಗಿದ್ದಾರೆ. ಇದು ಭಯೋತ್ಪಾದಕರ ದಾಳಿ ಎಂದು ಬಲೂಚಿಸ್ಥಾನದ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಹೇಳಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಮುಸಾಖೆಲ್ ನಲ್ಲಿ ಇದೆ ರೀತಿ ಕೃತ್ಯವೆಸಗಲಾಗಿತ್ತು. 9 ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸಿ ಗುರುತಿನ ಚಿಟಿ ನೋಡಿ ಹತ್ಯೆ ಮಾಡಿದ್ದರು.