ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜಸ್ತಾನ ಹಾಗೂ ಮಧ್ಯಪ್ರದೇಶದಲ್ಲಿ ಕೋಲ್ಡ್ರಿಫ್ ಹೆಸರಿನ ಕೆಮ್ಮಿನ ಔಷಧಿ ಕುಡಿದು 14 ಮಕ್ಕಳು ಮೃತಪಟ್ಟ ಘಟನೆ ನಡೆದಿದೆ. ಇದು ದೇಶದ ತುಂಬಾ ದೊಡ್ಡ ಸಂಚನ ಮೂಡಿಸಿದ್ದು, ಹೆತ್ತವರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಮಕ್ಕಳಿಗೆ ಕೆಮ್ಮಿನ ಔಷಧಿ ಕುಡಿಸಬೇಡಿ ಎಂದು ಹೇಳಲಾಗುತ್ತಿದೆ. ಇನ್ನು ರಾಜ್ಯಕ್ಕೆ ಪೂರೈಕೆಯಾಗುವ ಕೆಮ್ಮಿನ ಔಷಧಿಗಳ ಪರೀಕ್ಷೆಗೆ ಆರೋಗ್ಯ ಇಲಾಖೆ ಮುಂದಾಗಿದೆ.
ಔಷಧ ನಿಯಂತ್ರಣ ಹಾಗೂ ಸರಬರಾಜು ಇಲಾಖೆ ಕಾಫ್ ಸಿರಪ್ ಗಳ ಪರೀಕ್ಷೆಗೆ ಮುಂದಾಗಿದ್ದು, ಎಲ್ಲ ಕಂಪನಿಗಳ ಔಷಧಿಗಳ ಸಾಂಪಲ್ಸ್ ಪಡೆಯುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ರಾಜ್ಯ ಆರೋಗ್ಯ ಇಲಾಖೆ ವೈದ್ಯರ ಸಲಹೆ ಇಲ್ಲದೆ ಮಕ್ಕಳಿಗೆ ಕೆಮ್ಮಿನ ಔಷಧಿ ಕೊಡಬೇಡಿ ಎಂದು ಸೂಚಿಸಿದೆ.