ಪ್ರಜಾಸ್ತ್ರ ಸುದ್ದಿ
ಗುವಾಹಟಿ(Guwahati): ರಾಷ್ಟ್ರೀಯ ಹಬ್ಬದ ಸಂಭ್ರಮದ ವೇಳೆ ದೊಡ್ಡ ಮಟ್ಟದಲ್ಲಿ ದುಷ್ಕೃತ್ಯವೆಸಗಲು ಅಸ್ಸಾಂನ ದಂಗೆಕೋರರ ಗುಂಪು ಬರೋಬ್ಬರಿ 19 ಕಡೆ ಇಟ್ಟಿದ್ದ ಬಾಂಬ್(Bomb) ಗಳು ತಾಂತ್ರಿಕ ದೋಷದಿಂದ ಸ್ಫೋಟಗೊಂಡಿಲ್ಲವೆಂದು ಉಲ್ಫಾ(Ulfa-I) ಇಂಡಿಪೆಂಡೆಂಟ್ ಎನ್ನುವ ದಂಗೆಕೋರರ ಟೀಂ ಹೇಳಿದೆ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ. ಇಲ್ಲದೆ ಹೋದರೆ ಸ್ವಾತ್ರಂತ್ರ್ಯೋತ್ಸವದ ಖುಷಿಯಲ್ಲಿ ರಕ್ತದೋಕುಳಿ ಆಗುತ್ತಿತ್ತು.
ರಾಜಧಾನಿ ಗುವಾಹಟಿಯಲ್ಲಿ 8 ಕಡೆ ಸೇರಿ ರಾಜ್ಯದ ಬೇರೆ ಬೇರೆ ಕಡೆ 19 ಬಾಂಬ್ ಗಳನ್ನು ಇಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ 12 ಗಂಟೆಯೊಳಗೆ ಸ್ಫೋಟಗೊಳ್ಳಬೇಕಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಸ್ಫೋಟಗೊಂಡಿಲ್ಲವಂತೆ. ಇದರಿಂದಾಗಿ ಅಮಾಯಕ ಜೀವಗಳು ಬಲಿಯಾಗುವುದು ತಪ್ಪಿದೆ. ಈ ಸಂಘಟನೆ ಅಖಂಡ ಅಸ್ಸಾಂ ಬೇಡಿಕೆಯ ಸಲುವಾಗಿ 1979ರಲ್ಲೇ ಹುಟ್ಟಿ ಕೊಂಡಿದೆ. ಇದರಲ್ಲಿ ಸಧ್ಯ ಎರಡು ಬಣಗಳಿವೆ.
ಅರವಿಂದ್ ರಾಜ್ ಖೋವಾ ಬಣ ಸರ್ಕಾರದೊಂದಿಗೆ ಶಾಂತಿಯುತ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ, ಪರೇಶ್ ಬರುವಾ ನೇತೃತ್ವದ ತಂಡ ಇದಕ್ಕೆ ಒಪ್ಪಿಲ್ಲ. ಹೀಗಾಗಿ ರಾಜ್ಯದಲ್ಲಿ ಮತ್ತೆ ಅಶಾಂತಿ ಸೃಷ್ಟಿಸಿ ಜನರ ಜೀವ ಬಲಿ ಪಡೆಯುವ ಸಂಚು ರೂಪಿಸಲಾಗಿತ್ತಾ? 19 ಕಡೆ ಬಾಂಬ್ ಇಟ್ಟಿದ್ದರೂ ಈ ಬಗ್ಗೆ ಗುಪ್ತಚರ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ತಿಳಿಯದೆ ಹೋಗಿರುವುದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ.