ಪ್ರಜಾಸ್ತ್ರ ಸುದ್ದಿ
ಚಂಡೀಗಢ: ಸೋನಿಪತ್ ಖಾರ್ಖೋಡಾ ಪ್ರದೇಶದ ಕಾಲುವೆಯಲ್ಲಿ ಸೋಮವಾರ ಮಾಡೆಲ್ ಶೀತಲ್ ಅಲಿಯಾಸ್ ಸಿಮ್ಮಿ ಶವ ಪತ್ತೆಯಾಗಿದೆ. ಈ ಸಂಬಂಧ ಆಕೆಯ ಸ್ನೇಹಿತ ಸುನಿಲ್ ನನ್ನು ಬಂಧಿಸಲಾಗಿದ್ದು, ಇಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 14ರಂದು ಶೂಟಿಂಗ್ ಎಂದು ಮನೆಯಿಂದ ಹೋಗಿದ್ದರು. ಆದರೆ, ವಾಪಸ್ ಮನೆಗೆ ಬಂದಿರಲಿಲ್ಲ. ಹೀಗಾಗಿ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಶೀತಲ್ ಕೊನೆಯದಾಗಿ ಸುನಿಲ್ ಜೊತೆಗೆ ಕಾಣಿಸಿಕೊಂಡಿದ್ದಳು. ಆಕೆಯ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಶವ ಪತ್ತೆಯಾದ ಸ್ಥಳದಲ್ಲಿ ಸೋನಿಪತ್ ನ ಇಸ್ರಾನ್ ಮೂಲದ ವ್ಯಕ್ತಿಗೆ ಸೇರಿ ಕಾರು ಪತ್ತೆಯಾಗಿದೆ. ಶೀತಲ್ ಳನ್ನು ಸ್ನೇಹಿತ ಸುನಿಲ್ ಕೊಲೆ ಮಾಡಿರಬಹುದು ಅನ್ನೋ ಶಂಕೆಯ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.