ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ(Devara Hipparagi): ಪತಿಯೇ ಪತ್ನಿಯನ್ನು ಭೀಕರವಾಗ ಹತ್ಯೆ ಮಾಡಿದೆ ಪಟ್ಟಣದ ಅಂಬೇಡ್ಕರ್ ವೃತ್ತದ ಹತ್ತಿರದಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ನಾಜ್ಮೀನ್ ಮಹ್ಮದಯಾಸೀನ್ ದರ್ಗಾ(30) ಕೊಲೆಯಾದ ಮಹಿಳೆ. ಮಹ್ಮದಯಾಸೀನ್ ಫಕೀರ್ ದರ್ಗಾ(38) ಕೊಲೆ ಆರೋಪಿ ಪತಿಯಾಗಿದ್ದಾನೆ. ಭಾನುವಾರ ರಾತ್ರಿ ಸುಮಾರು 10 ಗಂಟೆಯಿಂದ ಮುಂಜಾನೆ 10 ಗಂಟೆಯ ನಡುವೆ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಕೊಲೆಯಾದ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿಯ ವಿನಾಃಕಾರಣ ಸಂಶಯ ಪಟ್ಟು ಹರಿತವಾದ ಆಯುಧದಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಕೊಲೆ ಆರೋಪಿ ಮಹ್ಮದಯಾಸೀನ್ ಇಂಡಿ ಮೂಲದವನಾಗಿದ್ದು, ದೇವರ ಹಿಪ್ಪರಗಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡುತ್ತಿದ್ದ. ಈತನ ಪತ್ನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಕೊಲೆಯ ಬಳಿಕ ಆರೋಪಿ ತನ್ನ ಎರಡು ಮಕ್ಕಳೊಂದಿಗೆ ಇಂಡಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ದೇವರ ಹಿಪ್ಪರಗಿ ಠಾಣೆ ಪೊಲೀಸರು ಇತನನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ.