ಪ್ರಜಾಸ್ತ್ರ ಸುದ್ದಿ
ಮೆಲ್ಬೋರ್ನ್(MCG): ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟೂರ್ನಿಯ 4ನೇ ಪಂದ್ಯ ಇಲ್ಲಿನ ಮೈದಾನದಲ್ಲಿ ಗುರುವಾರ ಶುರುವಾಗಿದೆ. ಟಾಸ್ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಿಮಿನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದಕ್ಕೆ ತಕ್ಕಂತ ಮೊದಲ ದಿನ ಬ್ಯಾಟ್ ಬೀಸಿದ್ದು, 6 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದೆ. ಸ್ಟೀವ್ ಸ್ಮಿತ್ 68 ಹಾಗೂ ನಾಯಕ ಕಮಿನ್ಸ್ 8 ರನ್ ಗಳೊಂದಿಗೆ ಕ್ರಿಸ್ ನಲ್ಲಿದ್ದಾರೆ.
ಸ್ಯಾಮ್ ಕೊಂಟ್ಸ್ 60, ಉಸ್ಮಾನ್ ಕ್ವಾಜಾ 57, ಮಾರ್ನಸ್ 72 ರನ್ ಗಳನ್ನು ಬಾರಿಸುವ ಮೂಲಕ ಉತ್ತಮ ಅಡಿಪಾಯ ಹಾಕಿದ್ದಾರೆ. ಹಿಂದಿನ ಪಂದ್ಯಗಳಲ್ಲಿ ಅಬ್ಬರಿಸಿದ್ದ ಟ್ರವಿಸ್ ಹೆಡ್ ಅನ್ನು ಬೂಮ್ರಾ ಶೂನ್ಯಕ್ಕೆ ಬೋಲ್ಡ್ ಮಾಡುವ ಮೂಲಕ ಶಾಕ್ ನೀಡಿದರು. ಭಾರತ ಪರ ಬೂಮ್ರಾ 3, ಆಕಾಶ ದೀಪ್, ಜಡೇಜಾ, ವಾಸಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು.