ಪ್ರಜಾಸ್ತ್ರ ಸುದ್ದಿ
ಸಿಡ್ನಿ(Sydney): ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಆಟಗಾರರು ಅತ್ಯಂತ ಕಳಪೆ ಆಟ ಪ್ರದರ್ಶಿಸುವ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋತಿದ್ದಾರೆ. 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ 3ನೇ ದಿನ 2ನೇ ವಿರಾಮದ ಹೊತ್ತಿಗೆ ಫಲಿತಾಂಶ ಬಂದಿದೆ. ಭಾರತ ನೀಡಿದ್ದ 162 ರನ್ ಗಳ ಗುರಿಯನ್ನು 6 ವಿಕೆಟ್ ಇರುವ ಮೊದಲೇ ಮುಟ್ಟುವ ಮೂಲಕ 3-1ರಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನಾಯಕ ಬೂಮ್ರಾ ಪಡೆ 185 ರನ್ ಗಳಿಗೆ ಮೊದಲ ಇನ್ನಿಂಗ್ಸ್ ನಲ್ಲಿ ಆಲೌಟ್ ಆಯಿತು. ನಂತರ ಆಸ್ಟ್ರೇಲಿಯಾ ಸಹ 181 ರನ್ ಗಳಿಗೆ ಆಲೌಟ್ ಆಯಿತು. ಆದರೆ, 2ನೇ ಇನ್ನಿಂಗ್ಸ್ ನಲ್ಲಿಯೂ ಭಾರತದ ಪ್ಲೇಯರ್ಸ್ ಆಡದೆ ಹೋದರು. ಹೀಗಾಗಿ 157 ರನ್ ಗಳಿಗೆ ಆಲೌಟ್ ಆಗುವ ಮೂಲಕ 162 ರನ್ ಗುರಿ ನೀಡಲಾಗಿತ್ತು. ಇದನ್ನು 4 ವಿಕೆಟ್ ಕಳೆದುಕೊಂಡು ಪ್ಯಾಟ್ ಕಮಿನ್ಸ್ ಬಳಗ ತಲುಪಿ ಗೆಲುವು ಸಾಧಿಸಿತು. ಟೀಂ ಇಂಡಿಯಾ ಉಪ ನಾಯಕ ಜಸ್ಪ್ರೀತ್ ಬೂಮ್ರಾ ಪ್ಲೇಯರ್ ಆಫ್ ದಿ ಸಿರೀಸ್ ಆದರು. ಆಸ್ಟ್ರೇಲಿಯಾದ ಸ್ಕಾಟ್ ಬೊಲಂಡ್ ಮೊದಲ ಇನ್ನಿಂಗ್ಸ್ ನಲ್ಲಿ 4, ಎರಡನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದು ಮಿಂಚಿ ಪ್ಲೇಯರ್ ಆಪ್ ದಿ ಮ್ಯಾಚ್ ಆದರು. ಈ ಗೆಲುವಿನೊಂದಿಗೆ 10 ವರ್ಷದ ಬಳಿಕ ತವರು ನೆಲದಲ್ಲಿ ಆಸ್ಟ್ರೇಲಿಯಾ ಸರಣಿ ಗೆಲುವಿನ ಸಂಭ್ರಮ ಆಚರಿಸಿತು.