ಪ್ರಜಾಸ್ತ್ರ ಸುದ್ದಿ
ಜೈಪುರ(Jaipur): ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿ 10 ದಿನಗಳ ಬಳಿಕ ಬದುಕಿ ಬಂದಿದ್ದಾಳೆ. ಹೊಸ ವರ್ಷದ ದಿನವೇ ಮಗುವಿಗೆ ಮರುಜನ್ಮ ಸಿಕ್ಕಿದೆ. ಸತತ ಕಾರ್ಯಾಚರಣೆ ಬಳಿಕ 170 ಅಡಿ ಆಳದ ಕೊಳವೆ(Borewell) ಬಾವಿಗೆ ಬಿದ್ದಿದ್ದ ಮಗುವನ್ನು(Rescue)ರಕ್ಷಿಸಲಾಗಿದೆ. ಕುಟುಂಬಸ್ಥರಲ್ಲಿ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿ ಸೇರಿದಂತೆ ಎಲ್ಲರಲ್ಲಿ ಸಂತಸ ಮನೆ ಮಾಡಿದೆ.
ಕೋಟಪುಟ್ಲಿ-ಬಹರೋಡ್ ಜಿಲ್ಲೆಯಲ್ಲಿ ಸುಮಾರು 170 ಅಡಿ ಆಳದ ಕೊಳವೆ 3 ವರ್ಷದ ಚೇತನಾ ಎನ್ನುವ ಬಾವಿಗೆ ಮಗು ಆಕಸ್ಮಿಕವಾಗಿ ಡಿಸೆಂಬರ್ 23ರಂದು ಬಿದ್ದಿದೆ. ಎನ್ ಡಿಆರ್ ಎಫ್(NDRF) ತಂಡ ತಜ್ಞರ ಸಲಹೆ ಪಡೆದು ಸತತ ಕಾರ್ಯಾಚರಣೆ ಮಾಡಿದೆ. ಮಳೆ ಬಂದು ಕಾರ್ಯಾಚರಣೆಗೆ ಅಡ್ಡಿ ಆಗಿತ್ತು. ಎಲ್ಲ ಸವಾಲುಗಳನ್ನು ಎದುರಿಸಿ ಮಗು ರಕ್ಷಿಸಲಾಗಿದೆ. ಸಧ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕಲ್ಪನಾ ಅಗರ್ ವಾಲ್ ಹೇಳಿದ್ದಾರೆ.