ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ 9 ವರ್ಷದ ಬಾಲಕನೊಬ್ಬ ಕಾಲುವೆಗೆ ಬಿದ್ದ ಘಟನೆ ಭಾನುವಾರ ನಡೆದಿದೆ. ತಾಯಿ ಬಟ್ಟೆ ತೊಳೆಯಲು ಹೋದಾಗ ಬಾಲಕ ಸಿದ್ದಪ್ಪ ದೇವೇಂದ್ರ ಹುಣಶ್ಯಾಳ ತಾಯಿಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಮನೆಗೆ ಹೋಗು ಎಂದು ತಾಯಿ ಹೇಳಿದರೂ ಕೇಳದೆ ಈಜುತ್ತೇನೆಂದು ಕಾಲುವಿಗೆ ಜಿಗಿದಿದ್ದಾನೆ ಎಂದು ಹೇಳಲಾಗುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.

ಹೊನ್ನಳ್ಳಿ ಗ್ರಾಮದ ದೇವೇಂದ್ರ ಹುಣಶ್ಯಾಳ ಹಾಗೂ ಲಲಿತಾ ಎಂಬುವರ ಏಕೈಕ ಮಗನಾಗಿದ್ದಾನೆ. ಈ ದಂಪತಿಗೆ ಐವರು ಪುತ್ರಿಯರಿದ್ದಾರೆ. ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಈ ಅನಾಹುತ ನಡೆದಿದ್ದು, ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಮಳೆಯಾಗಿದ್ದು ನೀರಿನ ಹರಿವು ಹೆಚ್ಚಾಗಿ ಇರುವುದರಿಂದ ಬಾಲಕನ ಪತ್ತೆ ಕಾರ್ಯ ತುಂಬಾ ಕಷ್ಟವಾಗಿದೆ ಎಂದು ಹೇಳಲಾಗುತ್ತಿದೆ.