ಪ್ರಜಾಸ್ತ್ರ ಸುದ್ದಿ
ಹೈದರಾಬಾದ್(Hyderabad): ದಕ್ಷಿಣ ಭಾರತದ ನಟಿ ಸಮಂತಾ ರುತು ಪ್ರಭು ಯಾರಿಗೆ ಗೊತ್ತಿಲ್ಲ ಹೇಳಿ. ಈಕೆ ಖ್ಯಾತ ನಟ ನಾಗರ್ಜುನ್ ಪುತ್ರ ನಟ ನಾಗಚೈತನ್ಯರನ್ನು 2017ರಲ್ಲಿ ಮದುವೆಯಾಗಿದ್ದರು. ಆದರೆ, ಅದು ನಾಲ್ಕೇ ವರ್ಷಕ್ಕೆ ಅಂತ್ಯವಾಯ್ತು. 2021ರಲ್ಲಿ ಇವರಿಬ್ಬರು ಡಿವೋರ್ಸ್ ಪಡೆದರು. ಇದಕ್ಕೆ ಬಿಆರ್ ಎಸ್(BRS KT Rama Rao) ನಾಯಕ ಕೆ.ಟಿ ರಾಮರಾವ್ ಕಾರಣವೆಂದು ತೆಲಂಗಾಣ ಸಚಿವೆ ಸುರೇಖಾ(Konda Sureka) ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ರಾಜಕೀಯ ಹಾಗೂ ಸಿನಿರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ.
ಇತ್ತೀಚೆನೆ ನಟ ನಾಗಾರ್ಜುನಗೆ(Akkineni Nagarjuna) ಸಂಬಂಧಿಸಿದ ಎನ್ ಕನ್ವೆನ್ಷನ್ ಸೆಂಟರ್ ನೆಲಸಮ ಮಾಡಲಾಯಿತು. ಜಾಗ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಿ ನೆಲಸಮ ಮಾಡಲಾಗಿದೆ. ಈ ವಿಚಾರವಾಗಿ ಕೆ.ಟಿ ರಾಮರಾವ್, ನಾಗಾರ್ಜುನಗೆ ಸಮಂತಾಳನ್ನು ನನ್ನ ಹತ್ತಿರ ಕಳಿಸು. ಎನ್ ಕನ್ವೆನ್ಷನ್ ನೆಲಸಮ ಮಾಡುವುದಿಲ್ಲ ಎಂದಿದ್ದರು. ನಾಗಾರ್ಜುನ್ ಸಮಂತಾಳಗೆ ರಾಮರಾವ್ ಬಳಿ ಹೋಗಲು ಬಲವಂತ ಮಾಡಿದ್ದಕ್ಕೆ ಆಕೆ ಒಪ್ಪಿಕೊಳ್ಳದೆ ಡಿವೋರ್ಸ್ ಪಡೆದಿದ್ದಾಳೆ ಎನ್ನುವ ಗಂಭೀರ ಆರೋಪವನ್ನು ಸಚಿವೆ ಸುರೇಖಾ ಮಾಡಿದ್ದಾರೆ. ಅಲ್ಲದೆ ಕೆ.ಟಿ ರಾಮರಾವ್ ಡ್ರಗ್ ವ್ಯಸನಿ. ಸಿನಿಮಾದವರಿಗಾಗಿ ಇವನು ರೇವ್ ಪಾರ್ಟಿ ಆಯೋಜಿಸುತ್ತಿದ್ದ. ಇವರ ದೌರ್ಜನ್ಯಕ್ಕೆ ಅನೇಕ ನಟಿಯರು ನಟನೆ ಬಿಟ್ಟಿದ್ದಾರೆ. ಕೆಲವರು ಮದುವೆ ಮಾಡಿಕೊಂಡ ದೂರ ಉಳಿದಿದ್ದಾರೆ ಅಂತಾನೂ ಆರೋಪಿಸಿದ್ದಾರೆ.
ಸಚಿವೆ ಸುರೇಖಾ ಹೇಳಿಕೆ ತುಂಬಾ ಗಂಭೀರವಾದದ್ದು, ಈ ಬಗ್ಗೆ ಕೆ.ಟಿ ರಾಮರಾವ್ ನೋಟಿಸ್ ನೀಡಿದ್ದಾರೆ. ನನ್ನ ವ್ಯಕ್ತಿತ್ವಕ್ಕೆ ಕಳಂತ ತರುವ ಕೆಲಸ ಮಾಡಿದ್ದಾರೆ. ಈ ಬಗ್ಗೆ 24 ಗಂಟೆಯೊಳಗೆ ಕ್ಷಮೆ ಕೇಳಿ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದಿದ್ದಾರೆ. ಇನ್ನು ಅಕ್ಕಿನೇನಿ ನಾಗಾರ್ಜುನ್ ಕುಟುಂಬ ಸಹ ಇದನ್ನು ಖಂಡಿಸಿದೆ. ಈ ಬಗ್ಗೆ ನಟಿ ಸಮಂತಾ(Samantha Ruth Prabhu) ಕಾಮೆಂಟ್ ಮಾಡಿ, ಮಹಿಳೆಯರನ್ನು ವಸ್ತುಗಳಂತೆ ನೋಡುವ ಗ್ಲ್ಯಾಮರ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು, ಪ್ರೀತಿಯಲ್ಲಿ ಬೀಳಲು, ಎದ್ದು ನಿಲ್ಲಲು ಮತ್ತು ಹೋರಾಡಲು ಶಕ್ತಿ ಬೇಕು. ನನ್ನ ಪಯಣವನ್ನು ಕೀಳಾಗಿ ಅಂದಾಜಿಸಬೇಡಿ. ಡಿವೋರ್ಸ್ ನನ್ನ ವೈಯಕ್ತಿಕ ನಿರ್ಧಾರ. ಇದರಲ್ಲಿ ರಾಜಕೀಯ ಒಳಸಂಚು ಇಲ್ಲ. ನನ್ನನ್ನು ರಾಜಕೀಯಕ್ಕೆ ಎಳೆದು ತರಬೇಡಿ ಎಂದಿದ್ದಾರೆ.