ಪ್ರಜಾಸ್ತ್ರ ಸುದ್ದಿ
ಕೊಪ್ಪಳ(Koppala): ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಸಾರಿಗೆ ಬಸ್ ವೊಂದು ಹಳ್ಳಕ್ಕೆ ಬೀಳುವುದರಿಂದ ತಪ್ಪಿದೆ. ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಬಳಿ ಬುಧವಾರ ಈ ಘಟನೆ ನಡೆದಿದೆ. ಹುಳ್ಕಿಹಾಳದಿಂದ ಸಿದ್ದಾಪುರಕ್ಕೆ ಬಸ್ ತೆರಳುತ್ತಿತ್ತು. ಈ ವೇಲೆ ಸೇತುವೆ ಬಳಿ ಸಿಲುಕಿದೆ. ಚಾಲಕ ಹಾಗೂ ನಿರ್ವಾಹಕ ಜೆಸಿಬಿ ಮೂಲಕ ಬಸ್ ಅನ್ನು ಹೊರಕ್ಕೆ ಎಳೆದಿದ್ದಾರೆ.
ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ಪರ್ಯಾಯ ರಸ್ತೆ ಮಾಡಲಾಗಿತ್ತು. ಆದರೆ, ನಿರಂತರ ಮಳೆಯಿಂದಾಗಿ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಬಸ್ ಸಿಲುಕಿಕೊಂಡಿದೆ. ಬಸ್ ಖಾಲಿಯಿದ್ದ ಪರಿಣಾಮ ಯಾವುದೇ ರೀತಿಯಿಂದ ವಾಲಿಕೊಂಡಿಲ್ಲ. ಚಾಲಕ ಹಾಗೂ ನಿರ್ವಾಪಕನಿಗೂ ಏನೂ ಆಗಿಲ್ಲ.