ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲಾಧಿಕಾರಿ(DC) ಟಿ.ಭೂಬಾಲನ್ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ರಿಷಿ ಆನಂದ ಅವರು ನಗರದ ಕೇಂದ್ರ ಗ್ರಂಥಾಲಯಕ್ಕೆ ಶುಕ್ರವಾರ ಭೇಟಿ ನೀಡಿದ್ದರು. ನಗರ ಕೇಂದ್ರ ಗ್ರಂಥಾಲಯ ವಿಜಯಪುರದ 2024-25ನೇ ಸಾಲಿನ ಅನುಮೋದನೆಯಾದ ಅಯ-ವ್ಯಯವನ್ನು ಸರ್ಕಾರದ ಆದೇಶದ ಪ್ರಕಾರ ಖರ್ಚು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಗ್ರಂಥಾಲಯ(Library)ಪರಂಪರೆ ಕಟ್ಟಡವನ್ನು ಪುನರ್ಚೆತನಗೊಳಿಸಿ, ಗ್ರಂಥಾಲಯದ ಆವರಣದಲ್ಲಿ ತಡೆಗೋಡೆ ನಿರ್ಮಿಸಲು ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಪಟ್ಟಿಯನ್ನು 3 ದಿನಗಳಲ್ಲಿ ತಯಾರಿಸಿ ಸಲ್ಲಿಸಲು ಸ್ಥಳದಲ್ಲಿದ್ದ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು. ಗ್ರಂಥಾಲಯಕ್ಕೆ ಬರುವ ಓದುಗರು ಸದಸ್ಯತ್ವವನ್ನು ಪಡೆದಲ್ಲಿ ಮಾತ್ರ ಪುಸ್ತಕ ವಿಭಾಗದಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಸಿಕೊಡುವಂತೆ ಹಾಗೂ ಸಾರ್ವಜನಿಕ ಓದುಗರಿಗೆ ಕುಡಿಯುವ ನೀರಿನ ಸಂಗ್ರಹಣೆಗಾಗಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಿಗೆ ಸೂಚಿಸಿದರು.