ಪ್ರಜಾಸ್ತ್ರ ಸುದ್ದಿ
ರಾಯಚೂರು(Raichoru): ಕ್ರಿಮಿನಾಶಕ ಸಿಂಪಡನೆ ಮಾಡಿದ್ದ ಚವಳೆಕಾಯಿ ತಿಂದು ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮಂಗಳವಾರ ಈ ಘಟನೆ ನಡೆದಿದೆ. ನಾಲ್ವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಮೇಶ ನಾಯಕ(38) ಹಾಗೂ ಪುತ್ರಿ ನಾಗಮ್ಮ(08) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.
ರಮೇಶ ಪತ್ನಿ ಪದ್ಮಾ(35), ಮಗ ಕೃಷ್ಣ(12), ಹಣ್ಮಕ್ಕಳಾದ ದೀಪಾ(06), ಚೈತ್ರಾ(10) ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಇವರಿಗೆ ಲಿಂಗಸಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಮೇಶ ತಮ್ಮ 2 ಎಕರೆ ಸ್ವಂತ ಜಮೀನಿನಲ್ಲಿ ಹತ್ತಿ ಬೆಳೆದಿದ್ದು, ಮನೆಗಾಗಿ ಬದುವಿನಲ್ಲಿ ಚವಳೆಕಾಯಿ ಸೇರಿ ಇತರೆ ತರಕಾರಿ ಬೆಳೆದಿದ್ದಾರೆ. ಶನಿವಾರ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದಾರೆ. ಸೋಮವಾರ ಚವಳೆಕಾಯಿ ತಂದು ರಾತ್ರಿ ಊಟ ಮಾಡಿದ್ದಾರೆ. ಬಳಿಕ ವಾಂತಿ ಶುರುವಾಗಿದೆ. ಇದೀಗ ಇಬ್ಬರು ಮೃತಪಟ್ಟಿದ್ದು, ನಾಲ್ವರು ಸ್ಥಿತಿ ಚಿಂತಾಜನಕವಾಗಿದೆ.