ಪ್ರಜಾಸ್ತ್ರ ಸುದ್ದಿ
ಶ್ರೀರಂಗಪಟ್ಟಣ(Srirangapattana): ಏಪ್ರಿಲ್ 17ರಂದು ನಾಪತ್ತೆಯಾಗಿದ್ದ ತಂದೆ ಹಾಗೂ ಇಬ್ಬರು ಮಕ್ಕಳ ಮೃತದೇಹ ಇಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಆಣೆಕಟ್ಟೆ ಹತ್ತಿದ ವಿಶ್ವೇಶ್ವರಯ್ಯ ನಾಲೆಯಲ್ಲಿ ಪತ್ತೆಯಾಗಿದೆ. ಕಾರಿನಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ. ಹೆಬ್ಬಾಳು ಗ್ರಾಮದ ಕುಮಾರಸ್ವಾಮಿ(38), ಮಕ್ಕಳಾದ ಅಕ್ಷತಾ(3), ಅದ್ವೈತಾ(8) ಮೃತ ದುರ್ದೈವಿಗಳು.
ಮೃತ ಕುಮಾರಸ್ವಾಮಿ ಮಕ್ಕಳೊಂದಿಗೆ ಏಪ್ರಿಲ್ 16ರಂದು ಬೆಂಗಳೂರಿನಿಂದ ಕೆ.ಆರ್ ನಗರಕ್ಕೆ ಹೊರಟಿದ್ದರು. ನಾನು ಕೆಆರ್ ಎಸ್ ಹತ್ತಿರ ಇದ್ದೇನೆ ಎಂದು ಹೇಳಿದ್ದ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಆ ನಂತರ ಅವರ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಏಪ್ರಿಲ್ 19ರಂದು ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇಂದು ಮೂವರ ಮೃತದೇಹ ನಾಲೆಯಲ್ಲಿ ಪತ್ತೆಯಾಗಿದ್ದು, ಈ ಘಟನೆ ಹೇಗಾಯ್ತು? ಸಾವಿನ ಕಾರಣವೇನು ಅನ್ನೋದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.