Ad imageAd image

ಹೇಮ ಸಮಿತಿ ವರದಿಯಲ್ಲಿ ಸಿನಿಮಾ ಪ್ರಪಂಚದ ಕರಾಳತೆ ಬಯಲು

ಸಿನಿಮಾ ಲೋಕ ಇಂದು ತುಂಬಾ ದೊಡ್ಡ ಮಟ್ಟದಲ್ಲಿ ಬೆಳದಿದೆ. ಹಿಂದೆ ನೂರಾರು ಚಿತ್ರಗಳಲ್ಲಿ ಲೀಡ್ ರೋಲ್ ಮಾಡಿದವರೂ ನೇಮ್, ಫೇಮ್, ಫೈನಾನ್ಸಿಯಲ್ ಸಮಸ್ಯೆ ಎದುರಿಸುತ್ತಿದ್ದರು.

Nagesh Talawar
ಹೇಮ ಸಮಿತಿ ವರದಿಯಲ್ಲಿ ಸಿನಿಮಾ ಪ್ರಪಂಚದ ಕರಾಳತೆ ಬಯಲು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕೊಚ್ಚಿ(Kochhi): ಸಿನಿಮಾ ಲೋಕ ಇಂದು ತುಂಬಾ ದೊಡ್ಡ ಮಟ್ಟದಲ್ಲಿ ಬೆಳದಿದೆ. ಹಿಂದೆ ನೂರಾರು ಚಿತ್ರಗಳಲ್ಲಿ ಲೀಡ್ ರೋಲ್ ಮಾಡಿದವರೂ ನೇಮ್, ಫೇಮ್, ಫೈನಾನ್ಸಿಯಲ್ ಸಮಸ್ಯೆ ಎದುರಿಸುತ್ತಿದ್ದರು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, ಎಂದಿಗೂ ಹೆಸರು ಕೆಡಿಸಿಕೊಂಡವರಲ್ಲ. ಕಲೆಯನ್ನು ಆರಾಧಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಸಿನಿಮಾ ಲೋಕ ನೂರಾರು ಕೋಟಿಯಿಂದ ಸಾವಿರಾರು ಕೋಟಿಯವರೆಗೂ ಹೂಡಿಕೆ ಮಾಡುವ ದೊಡ್ಡ ವ್ಯಾಪಾರವಾಗಿದೆ. ಒಂದೆರಡು ಸಿನಿಮಾಗಳಲ್ಲಿಯೇ(Flim) ನಟ, ನಟಿಯರಿಗೆ ವ್ಯಾಪಾಕ ಪ್ರಚಾರ ಸಿಗುತ್ತೆ. ಹಣದ ಸುರಿಮಳೆಯಾಗುತ್ತೆ. ಇದರ ಜೊತೆಗೆ ನಟಿಯರ ಮೇಲೆ ದೊಡ್ಡ ಮಟ್ಟದಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಅನ್ನೋದು ಬಹಿರಂಗವಾಗುತ್ತಿದೆ. ನೆರೆಯ ಕೇರಳ ಚಿತ್ರರಂಗದಲ್ಲಿನ ಕರಾಳ ಮುಖವನ್ನು ನ್ಯಾಯಮೂರ್ತಿ ಹೇಮ ಸಮಿತಿ ವರದಿ ಬಯಲು ಮಾಡಿದೆ. ಹೀಗಾಗಿ ಕೇರಳ ಸರ್ಕಾರ 7 ಜನರ ಎಸ್ಐಟಿ(SIT) ರಚನೆ ಮಾಡಿದೆ.

ನಿರ್ದೇಶಕ, ನಿರ್ಮಾಪಕ ರಂಜಿತ್(director ranjith) ವಿರದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಹೀಗಾಗಿ ಅವರು ಸರ್ಕಾರಿ ಸ್ವಾಮ್ಯದ ಚಲಚಿತ್ರ ಅಕಾಡಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನು ನಟ ಸಿದ್ಧಿಕಿ(actor siddique) ವಿರುದ್ಧ ಸಹ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು, ಇವರು ಕೇರಳ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಧ್ಯಕ್ಷ, ನಟ ಮೋಹನ್ ಲಾಲ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಮಲಯಾಳಂ(Mollywood) ಸಿನಿರಂಗ 15 ಪ್ರಭಾವಿಗಳ ಹಿಡಿತದಲ್ಲಿದೆಯಂತೆ. ಇಲ್ಲಿರುವ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರು ಸೇರಿದಂತೆ 15 ಬಲಿಷ್ಠ ಜನರ ಕೈಯಲ್ಲಿದ್ದು, ನಟಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ.

ಸಹ ನಟಿಯರಿಂದ ಹಿಡಿದು ನಾಯಕ ನಟಿಯರ ತನಕ ಅಡ್ಜಸ್ಟ್ ಮೆಂಟ್ ಗೆ ಒಪ್ಪಿದರೆ ಮಾತ್ರ ಅವಕಾಶ ಎನ್ನುವುದು ವರದಿಯಲ್ಲಿ ಬಯಲಾಗಿದೆ. ನಟಿ ರೇವತಿ ಸಂಪತ್, ನಟ ಸಿದ್ಧಿಕಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಈ ಹಿಂದೆ ನಟಿ ಭಾವನಾ(actress bhavana menon) ಮೆನನ್ ಸಹ ತಮಗಾದ ಕೆಟ್ಟ ಅನುಭವ ಹಂಚಿಕೊಂಡಿದ್ದರು. ಈಗ ಸಹ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಇನ್ನು ಹಿರಿಯ ನಟಿ ಊರ್ವಸಿ(actress urvashi) ಸಹ ವರದಿಯಲ್ಲಿನ ವಿಚಾರ ಕೇಳಿ ಭಯವಾಗಿದೆ ಎಂದಿದ್ದಾರೆ. ನನಗೆ ಆ ತರದ ಯಾವುದೇ ತೊಂದರೆಯಾಗಿಲ್ಲ. ನನ್ನ ಹೆತ್ತವರು ಸದಾ ಪರಿಶೀಲನೆ ಮಾಡುತ್ತಿದ್ದರು. ಬದುಕಿಗಾಗಿ ಕಲೆಯನ್ನು ನಂಬಿ ಬರುವವರಿಗೆ ಇದು ನಿಜಕ್ಕೂ ದೊಡ್ಡ ಆಘಾತ ಎಂದಿದ್ದಾರೆ.

ಅವಕಾಶಕ್ಕಾಗಿ ಕೆಲವರು ಮಾಡುವ ತಪ್ಪುಗಳು ಇತರರ ಮೇಲೂ ಬೀಳುತ್ತಿದೆ ಎನ್ನುವುದು ಸಹ ಬಹಿರಂಗ ಸತ್ಯ. ಕಾಸ್ಟಿಂಗ್ ಕೌಚ್(Cast Couching) ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಕಳೆದ ನಾಲ್ಕೈದು ವರ್ಷಗಳ ಹಿಂದೆ ಮೀ ಟು ಅಭಿಯಾನ ವಿಶ್ವಮಟ್ಟದಲ್ಲಿ ಚರ್ಚೆ ಆಯ್ತು. ಹಾಲಿವುಡ್ ನಟಿಯರಿಂದ ಹಿಡಿದು ಬಾಲಿವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್, ಸ್ಯಾಂಡಲ್ ವುಟ್ ನಟಿಯರು ಸಹ ಮೀ ಟು ಅಭಿಯಾನಕ್ಕೆ ಧ್ವನಿಯಾಗಿದ್ದರು. ನಿಜವಾದ ಕಲೆ ಮರೆಯಾಗಿ ಬಂಡವಾಳ ಹಾಕಿ ಲಾಭ ಮಾಡುವ ಉದ್ಯಮವಾಗಿ ಬದಲಾದ ಮೇಲೆ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಿನಿಮಾ ನಟ, ನಟಿಯರ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಉಳಿದಿಲ್ಲ. ಈಗ ಕೇರಳ ಸರ್ಕಾರ ರಚನೆ ಮಾಡಿರುವ ಎಸ್ಐಟಿ ತನಿಖೆಯಿಂದ ಯಾವೆಲ್ಲ ಅಂಶಗಳು ಬಯಲಿಗೆ ಬರುತ್ತವೆ ಕಾದು ನೋಡಬೇಕು.

WhatsApp Group Join Now
Telegram Group Join Now
Share This Article