Ad imageAd image

ಎರಡು ದಿನ ಹಿಂದೆ ಕಾಣೆಯಾಗಿದ್ದ ಶಿಕ್ಷಕಿ ಮೃತದೇಹ ಪತ್ತೆ

Nagesh Talawar
ಎರಡು ದಿನ ಹಿಂದೆ ಕಾಣೆಯಾಗಿದ್ದ ಶಿಕ್ಷಕಿ ಮೃತದೇಹ ಪತ್ತೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ದಾವಣಗೆರೆ(Davanagere): ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಭಾನುವಾರ ಮಧ್ಯಾಹ್ನ ಕಾಣೆಯಾಗಿದ್ದ ಶಿಕ್ಷಕಿಯ ಮೃತ ಇಂದು(ಮಂಗಳವಾರ) ಪತ್ತೆಯಾಗಿದೆ. ಹೊನ್ನಳ್ಳಿಯ ದುರ್ಗಿಗುಡಿ ವ್ಯಾಪ್ತಿಯ ನಿವಾಸಿ ಶಿಕ್ಷಕಿ ಪುಷ್ಪಲತಾ ಎಂ.ಟಿ(46) ತುಂಗಭದ್ರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೈನಾನ್ಸ್ ಕಂಪನಿಯವರ ಕಿರುಕುಳ ತಾಳಲಾರದೆ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಮನೆ ಕಟ್ಟಿಸುವ ಸಲುವಾಗಿ 40 ಲಕ್ಷ ರೂಪಾಯಿ ಫೈನಾನ್ಸ್ ಕಂಪನಿಯಲ್ಲಿ ಸಾಲ. 20 ಲಕ್ಷ ರೂಪಾಯಿ ಕೈ ಸಾಲ ಮಾಡಿದ್ದಂತೆ. ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದರು. ಇಲ್ಲಿನ ರಾಘವೇಂದ್ರ ಮಠದ ಹತ್ತಿರ ಸ್ವಲ್ಪ ಹೊತ್ತು ಕುಳಿತಿದ್ದಾರೆ. ಬಳಿಕ ನದಿ ಕಡೆ ಹೋಗಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿದ್ದರು. ಇಂದು ಮೃತದೇಹ ಪತ್ತೆಯಾಗಿದೆ.

ಕಳೆದ 20 ದಿನಗಳ ಹಿಂದೆ ಫೈನಾನ್ಸ್ ಕಂಪನಿಯವರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರಂತೆ. ಆಗ ಇಬ್ಬರನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ನಂತರ ಫೈನಾನ್ಸ್ ನವರು ಕೇಸ್ ವಾಪಸ್ ಪಡೆದಿದ್ದರು. ಸಾಲ ತೀರಿಸಲು ಮನೆ ಮಾರಾಟಕ್ಕೆ ಸಿದ್ಧವಾಗಿದ್ದರು ಎಂದು ಹೇಳಲಾಗುತ್ತಿದೆ. ಇದರ ನಡುವೆ ಶಿಕ್ಷಕಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article