ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಹದಿನೈದು ದಿನಗಳ ಹಿಂದೆ ತಿ.ನರಸೀಪುರಕ್ಕೆ ವರ್ಗಾವಣೆಗೊಂಡಿದ್ದ ಸಾಮಾಜಿಕ ಅರಣ್ಯ ವಲಯದ ಆರ್ ಎಫ್ಓ ಕಾಂತರಾಜ್ ಚೌಹಾಣ್ ಶವ ಸೋಮವಾರ ಪತ್ತೆಯಾಗಿದೆ. ಸಬ್ ಅರ್ಬನ್ ಬಸ್ ನಿಲ್ದಾಣದ ಹತ್ತಿರದ ಮದರ್ ತೆರೆಸಾ ರಸ್ತೆಯಲ್ಲಿ ಖಾಸಗಿ ಲಾಡ್ಜ್ ಹಿಂಭಾಗದ ಕಾರಿಡಾರ್ ನಲ್ಲಿ ಶವ ಪತ್ತೆಯಾಗಿದೆ.
ಭಾನುವಾರ ಕಾಂತರಾಜ್ ಹಾಗೂ ಗಂಗಾವತಿ ಮೂಲದ ಸ್ನೇಹಿತ ಮಲ್ಲನಗೌಡ ಪಾಟೀಲ ಜೊತೆಗೆ ಹೋಟೆಲ್ ಗೆ ಬಂದಿದ್ದಾರೆ. ಸೋಮವಾರ ಮುಂಜಾನೆ ಶವ ಪತ್ತೆಯಾಗಿದೆ. ಸ್ನೇಹಿತ ಮಲ್ಲನಗೌಡ ಪಾಟೀಲ ಸ್ಥಳದಲ್ಲಿ ಇಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.




