ಪ್ರಜಾಸ್ತ್ರ ಸುದ್ದಿ
ಬೀದರ(bidara): ಕ್ರೋಸರ್ ವಾಹನ ಉತ್ತರ ಪ್ರದೇಶದ ವಾರಣಾಸಿ ಹತ್ತಿರ ಶುಕ್ರವಾರ ನಸುಕಿನಜಾವ ಅಪಘಾತವಾಗಿ ಬೀದರ ಮೂಲದ ಐವರು ಮೃತಪಟ್ಟಿದ್ದಾರೆ. 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಾರಣಾಸಿಯ ರೂಪಾಪೂರ ಹತ್ತಿರದ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದಿದೆ. ಹೀಗಾಗಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬೀದರ ನಗರದ ಲಾಡಗೇರಿ ನಿವಾಸಿಗಳಾದ ನೀಲಮ್ಮಾ(62), ಸಂತೋಷಕುಮಾರ(45), ಕಲಾವತಿ(40), ಲಕ್ಷ್ಮಿ(57) ಹಾಗೂ ಸನೀತಾ(40) ಮೃತ ದುರ್ದೈವಿಗಳು. ಇನ್ನು ಭಗವಂತ, ಶಿವಾ, ಅನಿತಾ, ಗಣೇಶ, ಖುಷಿ, ಸಾಯಿ, ಕವಿತಾ, ಸುಜಾತಾ, ಸುಲೋಚನಾ ಎನ್ನುವರ ಗಂಭೀರವಾಗಿ ಗಾಯಗೊಂಡಿದ್ದಾರೆ. ಫೆಬ್ರವರಿ 18ರಂದು ಬೀದರನಿಂದ ಪ್ರಯಾಗ್ ರಾಜ್ ಗೆ ತೆರಳಿದ್ದರು. ಅಲ್ಲಿ ಪುಣ್ಯಸ್ನಾನ ಮುಗಿಸಿಕೊಂಡು ವಾರಣಾಸಿಗೆ ಭೇಟಿ ಕೊಟ್ಟು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.