ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸಿಡಿಲು ಬಡೆದು ಬರೋಬ್ಬರಿ 23 ಕುರಿಗಳು ಮೃತಪಟ್ಟ ಘಟನೆ ತಾಲೂಕಿನ ಆಲಗೂರು ಗ್ರಾಮದಲ್ಲಿನ ಹೊಲದಲ್ಲಿ ಸೋಮವಾರ ಸಂಜೆ ನಡೆದಿದೆ. ಭೀಮಣ್ಣ ಜನಪ್ಪಗೋಳ ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಸೋಮವಾರ ಸಂಜೆ ಮೋಡ ಕವಿದ ವಾತಾವರಣವಿದ್ದು, ಗುಡುಗು, ಸಿಡಿಲು ಕಾಣಿಸಿಕೊಂಡಿದೆ. ಭಾನುವಾರ ಸಂಜೆ ತಾಲೂಕಿನ ಹಲವು ಕಡೆ ಭರ್ಜರಿ ಮಳೆಯಾಗಿತ್ತು.
ಕುರಿಗಳು ಮೃತಪಟ್ಟಿರುವುದರಿಂದ ರೈತ ಭೀಮಣ್ಣ ಜನಪ್ಪಗೋಳ ಕಂಗಾಲಾಗಿದ್ದು, ಬದುಕಿಗೆ ಆಸರೆಯಾಗಿದ್ದ ಕುರಿಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.