ಪ್ರಜಾಸ್ತ್ರ ಸುದ್ದಿ
ಕತ್ರಾ (Katra): ಕಣಿವೆನಾಡು ಜಮ್ಮು ಕಾಶ್ಮೀರದಲ್ಲಿರುವ ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತವಾಗಿದ್ದು, ಬರೋಬ್ಬರಿ 30 ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ. 23 ಯಾತ್ರಿಕರು ಗಾಯಗೊಂಡಿದ್ದಾರೆ. ಸೈನಿಕರು ಸೇರಿದಂತೆ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದೆ. ಇಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಹಾಗೂ ಪ್ರವಾಹಗಳು ಉಂಟಾಗುತ್ತಿವೆ.
ತ್ರಿಕೂಟ ಬೆಟ್ಟದಲ್ಲಿರುವ ವೈಷ್ಣೋದೇವಿ ದೇವಸ್ಥಾನಕ್ಕೆ ಹೋಗುವ ಮಾರ್ಗ ಸಂಪೂರ್ಣವಾಗಿ ಹಾಳಾಗಿದೆ. ಮಂಗಳವಾರ ಮಧ್ಯಾಹ್ನವೂ ಭೂಕುಸಿತವಾಗಿ 9 ಮಂದಿ ಪ್ರಾಣ ಕಳೆದುಕೊಂಡಿದ್ದು, 21 ಜನರು ಗಾಯಗೊಂಡಿದ್ದರು. ಈಗ ಮತ್ತೊಂದು ಭೂಕುಸಿತ ಉಂಟಾಗಿದೆ. ನಾಪತ್ತೆಯಾದವರ, ಗಾಯಗೊಂಡವರ ರಕ್ಷಣೆಗೆ ವಿವಿಧ ಸಂಘ, ಸಂಸ್ಥೆಗಳು ಸಹ ಸಹಾಯ ಮಾಡುತ್ತಿವೆ.