ಪ್ರಜಾಸ್ತ್ರ ಸುದ್ದಿ
ನಾಸಿಕ್(Nashik): ಸುಮಾರು 200 ಆಳದ ಕಂದಕಕ್ಕೆ ಬಸ್ ವೊಂದು ಉರುಳಿ ಬಿದ್ದ ಪರಿಣಾಮ 7 ಪ್ರಯಾಣಿಕರ ಮೃತಪಟ್ಟಿರುವ(Death) ಘಟನೆ ಮಹಾರಾಷ್ಟ್ರದ ನಾಸಿಕ್-ಗುಜರಾತ್(Nashik-Gujarat Highway) ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ. ಖಾಸಗಿ ಬಸ್ ಇದಾಗಿದ್ದು, ಸಪುತರಾ ಘಾಟ್ ನಲ್ಲಿ ನಸುಕಿನಜಾವ ಸುಮಾರು 5.30ರ ವೇಳೆ ಅಪಘಾತ ನಡೆದಿದೆ ಎಂದು ಹೇಳಲಾಗುತ್ತಿದೆ.
ನಾಸಿಕ್ ನಿಂದ ಗುಜರಾತಿಗೆ ಯಾತ್ರಿಗಳನ್ನು ಕರೆದುಕೊಂಡು ಹೊರಟಿತ್ತು. ಸಪುತರಾ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. 7 ಮಂದಿ ಮೃತಪಟ್ಟು, 15 ಜನರು ಗಾಯಗೊಂಡಿದ್ದಾರೆ(Injured) ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ಈ ಬಸ್ಸಿನಲ್ಲಿ 48 ಮಂದಿ ಇದ್ದರು. ಪ್ರಯಾಣಿಕರೆಲ್ಲ ಮಧ್ಯಪ್ರದೇಶ ಮೂಲದವರೆಂದು ಹೇಳಲಾಗುತ್ತಿದೆ. ನಾಲ್ಕು ಬಸ್ ಗಳಲ್ಲಿ ಈ ತಂಡ ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಯಾತ್ರಾ ಸ್ಥಳಗಳನ್ನು ನೋಡಲು ಡಿಸೆಂಬರ್ 23ರಂದು ಪ್ರಯಾಣ ನಡೆಸಿದೆಯಂತೆ.