ಪ್ರಜಾಸ್ತ್ರ ಸುದ್ದಿ
ಕಾರವಾರ(Karawara): ಜೋಕಾಲಿ ಆಡುವಾಗ ಕುತ್ತಿಗೆಗೆ ದುಪ್ಪಟ್ಟ ಸಿಲುಕಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಭಟ್ಕಳ ತಾಲೂಕಿನ ತೆರ್ನಮಕ್ಕಿಯ ಸುಬ್ಬತ್ತಿಯಲ್ಲಿ ನಡೆದಿದೆ. 12 ವರ್ಷದ ಬಾಲಕಿ ಪ್ರಣಿತಾ ನಾಯ್ಕ್ ಮೃತ ಬಾಲಕಿ ಎಂದು ತಿಳಿದು ಬಂದಿದೆ. ಬಾಲಕಿ ಜೋಕಾಲಿ ಆಡುವಾಗ ಕುತ್ತಿಗೆಗೆ ದುಪ್ಪಟ್ಟ ಸಿಲುಕಿದೆ. ಇದನ್ನು ಬಿಡಿಸಿಕೊಳ್ಳಲು ಆಗದೆ ಒದ್ದಾಡಿದ್ದಾಳೆ.
ಇದನ್ನು ಪೋಷಕರು ನೋಡಿ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಶಾಲೆಗೆ ರಜೆ ಇದ್ದ ಕಾರಣ ಬಾಲಕಿ ಮನೆಯಲ್ಲಿ ಜೋಕಾಲಿ ಆಟವಾಡುತ್ತಿದ್ದಳು. ಮುರ್ಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.