ಪ್ರಜಾಸ್ತ್ರ ಸುದ್ದಿ
ದಾಂಡೇಲಿ(Dandeli): ಸ್ನೇಹಿತರೊಂದಿಗೆ ಹೋಗಿದ್ದ ಯುವಕ ಅನುಮಾನಸ್ಪದ(Suspicious)ರೀತಿಯಲ್ಲಿ ಮೃತಪಟ್ಟ ಘಟನೆ ಶನಿವಾರ ಸಂಜೆ ಜೋಯಿಡಾ-ದಾಂಡೇಲಿ ರಸ್ತೆಯ ಜನತಾ ಕಾಲೋನಿ ಹತ್ತಿರ ನಡೆದಿದೆ. ಜೋಸೆಫ್ ಅಮೃತ್(22) ಮೃತ ಯುವಕನಾಗಿದ್ದಾನೆ. ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ತನಿಖೆಯಿಂದ ಯುವಕನ ಸಾವಿನ ಕುರಿತು ತಿಳಿದು ಬರಬೇಕಿದೆ.
ಘಟನೆ ನಡೆದಿದ್ದು ಹೇಗೆ?: ಸ್ನೇಹಿತರೊಂದಿಗೆ ಜೋಸೆಫ್ ಅಮೃತ್ ಜೋಯಿಡಾಗೆ ಹೋಗಿದ್ದಾನೆ. ಅಲ್ಲಿಂದ ವಾಪಸ್ ಬರುವಾಗ ಎದುರುಗಡೆಯಿಂದ ವಾಹನ ಬರುವುದನ್ನು ನೋಡಿ ಹೆದರಿ ಬೈಕ್(Bike) ನಿಂದ ಹಾರಿದ್ದಾನಂತೆ. ಗಂಭೀರವಾಗಿ ಗಾಯಗೊಂಡ ಅವನನ್ನು ಸ್ನೇಹಿತರು ದಾಂಡೇಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಇದು ಜೊತೆಗೆ ಹೋಗಿದ್ದ ಸ್ನೇಹಿತರ ಮಾತುಗಳಾಗಿದ್ದು, ಪೊಲೀಸ್ ತನಿಖೆಯಿಂದ ಸತ್ಯ ಹೊರ ಬರಬೇಕಿದೆ.