ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬೃಹತ್ ಮರವೊಂದು ಯುವತಿಯ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಸ್ಕೂಟರ್ ಮೇಲೆ ಹೊರಟಿದ್ದ ಹೆಬ್ಬಾಳದ ಕೀರ್ತನಾ(24) ಮೃತ ಯುವತಿಯಾಗಿದ್ದಾಳೆ. ಇದೆ ವೇಳೆ ಬೈಕ್ ಸವಾರ ಭಾಸ್ಕರ ಅನ್ನೋ ಯುವಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳೆಯದಾದ ಬೃಹತ್ ಮರ ಬುಡಸಮೇತ ಬಿದ್ದಿದೆ. ಇದರ ಪರಿಣಾಮ ಯುವತಿ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಯುವಕನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.