ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಠಾಣೆ ಜಿಲ್ಲೆಯ ದಿವಾ-ಕೋಪರ್ ರೈಲು ಮಾರ್ಗದ ನಡುವೆ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಕನಿಷ್ಠ ಐವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ. ಕಸರಾ ಕಡೆಗೆ ಹೊರಟ್ಟಿದ್ದ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಸುಮಾರು 10 ಪ್ರಯಾಣಿಕರು ರೈಲಿನಿಂದ ಕೆಳಗೆ ಬಿದ್ದಿದ್ದಾರಂತೆ.
ಈ ರೈಲು ನಿಲ್ದಾಣದಲ್ಲಿ ನಿತ್ಯ ಜನದಟ್ಟಣೆ ಇರುತ್ತದೆ. ಇಂದು ಸಹ ಅದೆ ರೀತಿ ಇದ್ದು, ಬಾಗಿಲು ಬಳಿ ಸಹ ಪ್ರಯಾಣಿಕರು ನಿಂತುಕೊಂಡಿದ್ದರಂತೆ. ಕಳೆಗೆ ಬಿದ್ದ ಪ್ರಯಾಣಿಕರನ್ನು ಕಲ್ವಾದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಐವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.