Ad imageAd image

ಒಂದೇ ಕುಟುಂಬದ ನಾಲ್ವರ ಸಾವು

Nagesh Talawar
ಒಂದೇ ಕುಟುಂಬದ ನಾಲ್ವರ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹೈದರಾಬಾದ್(Hyderabad): ಮಕ್ಕಳಿಗೆ ವಿಷಕೊಟ್ಟು, ದಂಪತಿ ಆತ್ಮಹತ್ಯೆ(Couple Suicide) ಮಾಡಿಕೊಂಡಿರುವ ದಾರುಣ ಘಟನೆ ನಾಗರ್ಕರ್ನೂಲ್ ಜಿಲ್ಲೆಯ ಕುಲ್ವಕುರ್ತಿ ಮಂಡಲದ ಮೊಕರಲನ್ ಎಂಬಲ್ಲಿ ನಡೆದಿದೆ. ಚಂದ್ರಶೇಖರ್ ರೆಡ್ಡಿ(40) ಹಾಗೂ ಪತ್ನಿ ಕವಿತಾ(35), ಮಕ್ಕಳಾದ ಶ್ರೀತಾ(13), ವಿಶ್ವಂತ್(10) ಮೃತ ದುರ್ದೈವಿಗಳು. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ವರ ಸಾವಿನಿಂದ ಮನೆಯವರು, ಸಂಬಂಧಿಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಹಬ್ಸಿಗುಡದ ಮಹೇಶ್ವರನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಚಂದ್ರಶೇಖರ್ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ 6 ತಿಂಗಳಿಂದ ಕೆಲಸ ಇರಲಿಲ್ಲವಂತೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ(Financial Struggles) ಸಿಲುಕಿದ್ದು, ಇದೇ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಬಂಧಿಕರು ಕಳೆದ ರಾತ್ರಿ ಫೋನ್ ಮಾಡಿದ್ದಾರೆ. ಆದರೆ, ಫೋನ್ ಸ್ವೀಕರಿಸಿಲ್ಲ. ಹೀಗಾಗಿ ಮನೆಗೆ ಬಂದು ನೋಡಿದರೆ ದಂಪತಿ ಫ್ಯಾನ್ ಗೆ ನೇಣು ಹಾಕಕೊಂಡಿದ್ದಾರೆ. ಮಕ್ಕಳು ಕೋಣೆಯ ಹಾಸಿಗೆಯಲ್ಲಿ ಮೃತಪಟ್ಟಿದ್ದು ಕಂಡು ಶಾಕ್ ಆಗಿದೆ. ಉಸ್ಮಾನಿಯಾ ವಿಶ್ವವಿದ್ಯಾಲಯದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

WhatsApp Group Join Now
Telegram Group Join Now
Share This Article