Ad imageAd image

ಆಕಸ್ಮಿಕವಾಗಿ ನೀರಿಗೆ ಬಿದ್ದು ಮೂವರು ಯುವತಿಯರ ಸಾವು

Nagesh Talawar
ಆಕಸ್ಮಿಕವಾಗಿ ನೀರಿಗೆ ಬಿದ್ದು ಮೂವರು ಯುವತಿಯರ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ರಾಮನಗರ(Ramanagara): ಜಲಾಶಯದ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಮೂವರು ಯುವತಿಯರು ಮೃತಪಟ್ಟ ಘಟನೆ ಮಾಗಡಿ ತಾಲೂಕಿನ ವೈಜಿಗುಡ್ಡದಲ್ಲಿ ನಡೆದಿದೆ. ಬೆಂಗಳೂರು ಮೂಲದ ರಾಘವಿ(18), ಮಧುಮಿತ(20) ಹಾಗೂ ರಮ್ಯ(22) ಮೃತ ದುರ್ದೈವಿಗಳು. 7 ಯುವತಿಯರು ಡ್ಯಾಂ ನೋಡಲು ಇಲ್ಲಿಗೆ ಬಂದಿದ್ದಾರೆ. ಇದರಲ್ಲಿ ಓರ್ವ ಯುವತಿಗೆ ಆಯತಪ್ಪಿ ಡ್ಯಾಂಗೆ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಹೋದ ಯುವತಿಯರು ಸಹ ಜಲಾಶಯದೊಳಗೆ ಬಿದ್ದಿದ್ದಾರೆ.

ಈ ದುರಂತದಲ್ಲಿ ಮೂವರು ಯುವತಿಯರು ಮೃತಪಟ್ಟಿದ್ದಾರೆ. ನಾಲ್ವರನ್ನು ಯುವಕನೊಬ್ಬ ರಕ್ಷಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ. ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

WhatsApp Group Join Now
Telegram Group Join Now
Share This Article