ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ(Chamarajanagara): ತಾಯಿ ಹುಲಿ ಹಾಗೂ ಮೂರು ಮರಿಗಳು ಸೇರಿ ನಾಲ್ಕು ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ವೃತ್ತ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದು, ವಿಷ ಪ್ರಾಷನದಿಂದ ಹುಲಿಗಳು ಮೃತಪಟ್ಟಿವೆ ಎಂದಿದ್ದಾರೆ. ಹನೂರ ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂನಲ್ಲಿ ನಾಲ್ಕು ಹುಲಿಗಳ ಮೃತಪಟ್ಟಿರುವುದು ಗುರುವಾರ ಬೆಳಕಿಗೆ ಬಂದಿದೆ. ಹುಲಿಗಳ ಮರಣೋತ್ತರ ಪರೀಕ್ಷೆ ಪ್ರಕಾರ ವಿಷ ಹಾಕಿರುವುದು ಪತ್ತೆಯಾಗಿದೆ. ಹುಲಿಗಳು ಹಾಗೂ ಹಸುವಿನ ಅಂಗಾಂಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾಯಿ ಹುಲಿ 10 ವರ್ಷ, ಮರಿ ಹುಲಿಗಳು 8 ರಿಂದ 10 ತಿಂಗಳು ಆಗಿದ್ದು, ಮೂರು ದಿನಗಳ ಹಿಂದೆ ಮೃತಪಟ್ಟಿವೆ. ಬೇಟಿಯಾಡಿದ ನಂತರ ಹಸುವಿಗೆ ವಿಷ ಹಾಕಲಾಗಿದೆಯೇ ಅಥವ ವಿಷಪ್ರಾಷನವಾದ ಹಸುವನ್ನು ಕಾಡಿನೊಳಗೆ ಬಿಡಲಾಗಿತ್ತೇ ಅನ್ನೋದರ ತನಿಖೆಯೂ ನಡೆದಿದೆ. ಮೃತ ಹಸುವಿನ ಮಾಲೀಕನ ಪತ್ತೆ ಕಾರ್ಯ ನಡೆದಿದೆ. ಇನ್ನು ವಾಚರ್ ಗಳಿಗೆ ಸರಿಯಾಗಿ ಸಂಬಳ ನೀಡದೆ ಇರುವುದಕ್ಕೆ ಗಸ್ತು ತಿರುಗುವುದನ್ನು ಸರಿಯಾಗಿ ಮಾಡುತ್ತಿರಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.