ಪ್ರಜಾಸ್ತ್ರ ಸುದ್ದಿ
ಆನೇಕಲ್(Anekal): ಈ ಭಾಗದ ಐತಿಹಾಸಿಕ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಯ ವೇಳೆ ಬರೋಬ್ಬರಿ 110 ಅಡಿ ಎತ್ತರದ ಬೃಹತ್ ತೇರು ಶನಿವಾರ ಸಂಜೆ ಗಾಳಿ, ಮಳೆಗೆ ಧರೆಗುರುಳಿದೆ. ಈ ಅನಾಹುತದಲ್ಲಿ ಇಬ್ಬರು ಮೃತಪಟ್ಟಿದ್ದು, 5 ಜನರು ಗಾಯಗೊಂಡಿದ್ದಾರೆ. ದೊಡ್ಡನಾಗಮಂಗಲ ಗ್ರಾಮಸ್ಥರು 110 ಅಡಿ ಎತ್ತರದ ತೇರನ್ನು ಹುಸ್ಕೂರಿನತ್ತ ಎಳೆದುಕೊಂಡು ಹೊರಟಿದ್ದರು. ಚಿಕ್ಕನಾಗಮಂಡಲ ಹತ್ತಿರ ಶನಿವಾರ ಸಂಜೆ ದಿಢೀರ್ ಎಂದು ತೇರು ಉರುಳಿ ಬಿದ್ದಿದೆ. ತಮಿಳುನಾಡು ಮೂಲದ ಲೋಹಿತ್(24) ಹಾಗೂ ಬೆಂಗಳೂರಿನ ಜ್ಯೋತಿ(14) ಮೃತರು ಎಂದು ಹೇಳಲಾಗುತ್ತಿದೆ.
ಹುಸ್ಕೂರು ಮದ್ದೂರಮ್ಮ ಜಾತ್ರೆಗೆ 15ಕ್ಕೂ ಹೆಚ್ಚು ತೇರುಗಳು ಬರುತ್ತವೆ. ವರ್ಷಗಳು ಕಳೆದಂತೆ ತೇರುಗಳ ಸಂಖ್ಯೆ ಕಡಿಮೆಯಾಗಿದೆಯಂತೆ. ರೈಲು ವಿದ್ಯುದ್ದೀಕರಣದಿಂದಾಗಿ ಈ ವರ್ಷ ತೇರುಗಳ ಸಂಖ್ಯೆ 6ಕ್ಕೆ ಇಳಿದಿದೆ. ಇದರಲ್ಲಿ 2 ತೇರುಗಳು ಉರುಳಿ ಬಿದ್ದಿವೆ. ಇನ್ನೊಂದು ರಥದ ಗಾಲಿ ಸಮಸ್ಯೆ ಕಾಣಿಸಿಕೊಂಡಿತು. ಉಳಿದಿದ್ದು ದೇವಸ್ಥಾನ ತಲುಪಿವೆ ಎಂದು ತಿಳಿದು ಬಂದಿದೆ. ಇಲ್ಲಿ ರಥಗಳು ಉರುಳಿ ಬೀಳುವುದು ಇದೇ ಮೊದಲಲ್ಲ ಎಂದು ಜನರು ಹೇಳುತ್ತಾರೆ. 2012ರಲ್ಲಿ ರಾಯಸಂದ್ರ ರಥ, 2013ರಲ್ಲಿ ಕಗ್ಗಲಿಪುರ ರಥ, 2018ರಲ್ಲಿ ನಾರಾಯಣಘಟ್ಟ ತೇರು, 2024ರಲ್ಲಿ ಹೀಲಲಿಗ ತೇರು ಉರುಳಿ ಬಿದ್ದಿವೆ. ಈ ವರ್ಷ ದೊಡ್ಡನಾಮಂಗಲದ ತೇರು ಸೇರಿ ಮೂವರು ತೇರುಗಳು ಉರುಳಿ ಬಿದ್ದಿವೆ.