ಪ್ರಜಾಸ್ತ್ರ ಸುದ್ದಿ
ಕುಂದಾಪುರ(Kundapura): ಸಾಲದಿಂದ ಹೊರ ಬರಲು ಆಗದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು ಅದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಕುಂದಾಪುರದ ತೆಕ್ಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಕಂಚುಗಾರುಬೆಟ್ಟೆ ನಿವಾಸಿ ಮಾಧವ ದೇವಾಡಿಗ(56), ಇವರ ಮಗ ಗಿರೀಶ್(22) ಮೃತ ದುರ್ದೈವಿಗಳು. ಪತ್ನಿ ತಾರಾ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೆಟ್ರೋಲ್ ಬಂಕ್ ನಲ್ಲಿ ಮಾಧವ ಕೆಲಸ ಮಾಡುತ್ತಿದ್ದರು. ಬ್ಯಾಂಕ್ ನಿಂದ ಪಡೆದ ಸಾಲ ಅತಿಯಾಗಿತ್ತು. ಹೀಗಾಗಿ ನೋಟಿಸ್ ಬರುತ್ತಿದ್ದವು. ಇದಕ್ಕೆ ಅಂಜಿ ತಂದೆ ಹಾಗೂ ಮಗ ಬಾವಿಗೆ ಹಾರಿದ್ದಾರೆ. ಇದನ್ನು ತಿಳಿದ ಪತ್ನಿಯೂ ಬಾವಿಗೆ ಹಾರಿದ್ದಾಳೆ. ಇವರ ಕಿರುಚಾಟ ಕೇಳಿ ನೆರೆಹೊರೆಯವರು ಬಂದು ತಾರಾಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ. ಸಾವಿಗೂ ಮುನ್ನ ಡೆತ್ ನೋಟ್ ಬರೆದಿದ್ದಾರಂತೆ.